ಮೋದಿ ಮುಖವಾಡದಲ್ಲಿ ಮತ ಕೇಳಲು ನಾಚಿಕೆಯಾಗಬೇಕು: ಡಾ.ಪುಷ್ಪಾ

ಶನಿವಾರ, ಏಪ್ರಿಲ್ 20, 2019
28 °C

ಮೋದಿ ಮುಖವಾಡದಲ್ಲಿ ಮತ ಕೇಳಲು ನಾಚಿಕೆಯಾಗಬೇಕು: ಡಾ.ಪುಷ್ಪಾ

Published:
Updated:
Prajavani

ಚಾಮರಾಜನಗರ: ‘ರಾಜ್ಯದ ಬಿಜೆಪಿಯ ಎಲ್ಲ ಅಭ್ಯರ್ಥಿಗಳು ನರೇಂದ್ರ ಮೋದಿ ಅವರ ಹೆಸರನ್ನು ಹೇಳಿಕೊಂಡು ಮತ ಕೇಳುತ್ತಿದ್ದಾರೆ. ಕ್ಷೇತ್ರಕ್ಕೆ ಅಭ್ಯರ್ಥಿಗಳ ಕೊಡುಗೆ ಏನೂ ಇಲ್ಲವೆ? ಮೋದಿ ಮುಖವಾಡ ಮುಂದಿಟ್ಟು ಜನರ ಬಳಿ ಮತ ಕೇಳಲು ನಾಚಕೆಯಾಗಬೇಕು’ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್‌ ಅವರು ಮಂಗಳವಾರ ಹೇಳಿದರು.

ಭಾರತೀಯ ಜನದ್ರೋಹಿ ಪಕ್ಷ: ‘ಮೋದಿ ಅವರು ತಮ್ಮ ಪ್ರಣಾಳಿಕೆಯಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಸುಳ್ಳು ಭಾಷಣದಿಂದ ಮುಗ್ದ ಯುವಕರೂ ಸೇರಿದಂತೆ ಜನರನ್ನು ಮರಳು ಮಾಡಿದ್ದಾರೆ. ಬಿಎಸ್‌ಎನ್‌ಎಲ್‌ ರಾಷ್ಟ್ರದ ಗೌರವದ ಸಂಕೇತ. ಅದನ್ನು ಬಿಟ್ಟು ಈಗ ಅದರ ಮೇಲೆ ಸಮಾಧಿ ಕಟ್ಟಿ ಈಗ ಜಿಯೋ ತರುತ್ತಿದ್ದಾರೆ. ವಿಜಯ ಬ್ಯಾಂಕ್‌ ಆರ್ಥಿಕವಾಗಿ ಸದೃಢವಾಗಿದ್ದರೂ ಬ್ಯಾಂಕ್‌ ಆಫ್‌ ಬರೋಡಾ ಜೊತೆ ಸೇರಿಸಿದರು. ಬೇಟಿ ಪಡಾವೋ ಬೇಟಿ ಬಚಾವೂ ಅನುದಾನ ಜಾಹೀರಾತಿಗೆ ಶೇ 54ರಷ್ಟು ಹಣ ಖರ್ಚಾಗಿದೆ. ಇನ್ನು ಉಳಿದ ಹಣದಲ್ಲಿ 15 ಪೈಸೆ ಮಾತ್ರ ಹೆಣ್ಣುಮಗುವಿಗೆ ಸೇರುತ್ತದೆ. ಈ ಅನುದಾನ ಬಳಸಿ ಏನು ಮಾಡಲು ಸಾಧ್ಯ’ ಎಂದು ಪತ್ರಿಕಾಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

‘ರಾಷ್ಟ್ರದಲ್ಲಿ ರೈತರು, ಮಹಿಳೆಯರು, ಮಕ್ಕಳು, ಬಡ ಜನರ ಅಭಿವೃದ್ಧಿಯ ವಿಷಯ ಕುರಿತು ಪ್ರಣಾಳಿಕೆಯಲ್ಲಿ ತಿಳಿಸಿಲ್ಲ. ವೀರ ಯೋಧರ ಮರಣದ ಮೇಲೆ ಮತ ಕೇಳುತ್ತಿದ್ದಾರೆ. ಇವರನ್ನು ಜನ ತಿರಸ್ಕರಿಸಬೇಕು’ ಎಂದರು.

‘ಬಡವರಿಗೆ ಹಣ ನೀಡುತ್ತೇವೆ ಎಂದು ಜನ ಧನ ಖಾತೆ ತೆರೆಸಿದರು. ಆದರೆ, ಈವರೆಗೂ ಹಣ ಖಾತೆಗೆ ಸೇರಿಲ್ಲ. ಪಾಸ್‌ ಪುಸ್ತಕಗಳು ದೂಳು ಹಿಡಿಯುತ್ತಿವೆ. ಉಜ್ವಲ ಯೋಜನೆ ಕೊಟ್ಟು ದೊಡ್ಡ ಪ್ರಚಾರ ತೆಗೆದುಕೊಂಡರು.  ಶೇ 5ರಷ್ಟು ಮಹಿಳೆಯರಿಗೆ ಉಪಯೋಗವಾಗಿಲ್ಲ. ಉಚಿತ ಸಿಲಿಂಡರ್‌ ತಲುಪಿಲ್ಲ. ಸಬ್ಸಿಡಿ ಹಣ ಖಾತೆಗೆ ಜಮೆಯಾಗಿಲ್ಲ. ಗ್ರಾಮೀಣ ಮಹಿಳೆಯರು ಹೆಚ್ಚು ಹಣ ಕೊಟ್ಟು ಸಿಲಿಂಡರ್‌ ಪಡೆಯುತ್ತಿದ್ದಾರೆ. ಮತ್ತೊಂದು ಸಿಲಿಂಡರ್‌ ಪಡೆಯಲು ಕಷ್ಟ ಪಡುತ್ತಿದ್ದಾರೆ’ ಎಂದರು. 

ಧ್ರುವನಾರಾಯಣಗೆ ಮತ ನೀಡಿ: ‘ಕ್ಷೇತ್ರದ ಮತದಾರರು ಅಭಿವೃದ್ಧಿ ಕೆಲಸ, ಅಭಿವೃದ್ಧಿ ಚಿಂತನೆ ಮಾಡುವ ಅಭ್ಯರ್ಥಿ ಆರ್.ಧ್ರುವನಾರಾಯಣ ಅವರಿಗೆ ಮತ ನೀಡಬೇಕು. ಸಜ್ಜನಿಕೆ, ಸರಳತೆಯ ವ್ಯಕ್ತಿ. ಅವರು ಮತ್ತೊಮ್ಮೆ ಬಂದರೆ ಕ್ಷೇತ್ರ ಅಭಿವೃದ್ಧಿಯಾಗುತ್ತದೆ’ ಎಂದರು.

ಕಾಂಗ್ರೆಸ್‌ ಮುಖಂಡರಾದ ವಾಸಂತಿ ಶಿವಣ್ಣ, ಲತಾ ಜಯಣ್ಣ, ರತ್ನಮ್ಮ ಬಸವರಾಜು, ಚಿನ್ನಮ್ಮ, ಶಾಂತಲಾ ಇದ್ದರು.

‘ಸಿ.ಟಿ.ರವಿ ನಾಲಾಯಕ್‌’

‘ಮಹಿಳೆಯರನ್ನು ಕುರಿತು ಅಸಹ್ಯವಾಗಿ ಮಾತನಾಡುವ ಶಾಸಕ ಸಿ.ಟಿ.ರವಿ ಒಬ್ಬ ನಾಲಾಯಕ್‌. ಹೆಣ್ಣಿನ ಗರ್ಭದ ವಿಚಾರವಾಗಿ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ. ಅಸಹ್ಯ ಪದಗಳನ್ನು ಬಳಸಿದ್ದಾರೆ. ಚುನಾವಣಾ ಆಯೋಗ ಇವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇವರು ಕ್ಷಮಾಪಣೆಗೂ ಅರ್ಹರಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !