ಚರ್ಚೆ ನಡೆಸದೆ ಮಹೇಶ್ ತರಾತುರಿಯ ರಾಜೀನಾಮೆ: ಪುಟ್ಟರಂಗಶೆಟ್ಟಿ

7

ಚರ್ಚೆ ನಡೆಸದೆ ಮಹೇಶ್ ತರಾತುರಿಯ ರಾಜೀನಾಮೆ: ಪುಟ್ಟರಂಗಶೆಟ್ಟಿ

Published:
Updated:
Deccan Herald

ಚಾಮರಾಜನಗರ: ‘ಕೊಳ್ಳೇಗಾಲ ಕ್ಷೇತ್ರದ ಶಾಸಕ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸಚಿವ ಎನ್.ಮಹೇಶ್ ಅವರು ಪಕ್ಷದ ಕಾರ್ಯಕರ್ತರು, ಮುಖಂಡರೊಂದಿಗೆ ಸಮರ್ಪಕವಾಗಿ ಚರ್ಚಿಸಬೇಕಿತ್ತು. ಸಚಿವ ಸ್ಥಾನಕ್ಕೆ ತರಾತುರಿಯಲ್ಲಿ ರಾಜೀನಾಮೆ ನೀಡಿರುವುದು ತಪ್ಪು’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ಪಟ್ಟಣದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧಿಕೃತ ಕಚೇರಿಯ ಉದ್ಘಾಟನೆ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಅವರು ಸಚಿವರಾಗಿ ಮುಂದುವರಿದಿದ್ದರೆ, ಜಿಲ್ಲೆಯಲ್ಲಿ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಉತ್ತೇಜನ ದೊರೆಯುತ್ತಿತ್ತು. ನಬಾರ್ಡ್‌ನಿಂದ ಅನುದಾನವೂ ಬಿಡುಗಡೆಯಾಗುತ್ತಿತ್ತು. ಈಗ ಅವರ ರಾಜೀನಾಮೆಯಿಂದ ಜಿಲ್ಲೆಗೆ ನಷ್ಟವಾಗಿದೆ. ಅವರ ದಿಢೀರ್‌ ತೀರ್ಮಾನದಿಂದ ಮತದಾರರು ಕೂಡ ದಿಗ್ಭ್ರಮೆಗೊಂಡಿದ್ದಾರೆ’ ಎಂದರು.

ತೆಗೆಸುತ್ತೇನೆ ಎಂದು ಹೇಳಿಲ್ಲ

‘ಅವರನ್ನು ಸಚಿವ ಸಂಪುಟದಿಂದ ತೆಗೆಸುತ್ತೇನೆ ಎಂದು ನಾನು ಹೇಳಿಲ್ಲ. ಅವರು ಸರ್ಕಾರದ ಭಾಗವಾಗಿದ್ದಾರೆ. ಹಾಗಾಗಿ ಗೌರಯುತವಾಗಿ ನಡೆದುಕೊಳ್ಳಬೇಕು. ಕಾಂಗ್ರೆಸ್, ಜೆಡಿಎಸ್‌, ಬಿಎಸ್‌ಪಿ ಮೂರು ಪಕ್ಷಗಳು ಈಗ ಒಗ್ಗಟ್ಟಾಗಿವೆ. ಈಗಿರುವಾಗ ನಾವೇ ಕಚ್ಚಾಡುವುದು ಸರಿಯಲ್ಲ. ಗೌರಯುತವಾಗಿ ನಡೆದುಕೊಳ್ಳದಿದ್ದಾಗ ಒಮ್ಮೊಮ್ಮೆ ಹೇಳಬೇಕಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಅರ್ಜಿ, ಅಹವಾಲು ಸ್ವೀಕಾರಕ್ಕೆ ಕೊಠಡಿ: ಹಿಂದುಳಿದ ವರ್ಗ ಹಾಗೂ ಅಂಗವಿಕಲರು ಸೇರಿದಂತೆ ಜನರಿಗೆ ಅರ್ಜಿ, ಅಹವಾಲುಗಳಿದ್ದರೆ ಸಚಿವರ ಕೊಠಡಿಗೆ ನೀಡಬಹುದು. ವಾರಕ್ಕೊಮ್ಮೆ ಕೊಠಡಿಗೆ ಬಂದು ಅರ್ಜಿಗಳನ್ನು ಪರಿಶೀಲಿಸುತ್ತೇನೆ ಎಂದರು.

‘ವಾರದಲ್ಲಿ ಯಾವ ದಿನ ಇರುತ್ತೇನೆ ಎನ್ನುವುದನ್ನು ಕೊಠಡಿಯ ಹೊರಗೆ ಫಲಕದಲ್ಲಿ ನಮೂದಿಸಿ ಹಾಕುವ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಮಾಡಲಾಗುತ್ತದೆ’ ಎಂದು ಹೇಳಿದರು.

ಸಂಸದ ಆರ್.ಧ್ರುವನಾರಾಯಣ ಅವರು ಕಚೇರಿ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಸದಸ್ಯೆ ಶಶಿಕಲಾ, ತಾಲ್ಲೂಕು ಪಂಚಾಯಿತಿ ಸದಸ್ಯ ಕುಮಾರ್‌ನಾಯಕ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪಿ.ಮರಿಸ್ವಾಮಿ ಹಾಗೂ ಸ್ಥಳೀಯ ಮುಖಂಡರು ಇದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !