ಕಸ ತೆರವು ಕಾರ್ಯ ಆರಂಭ

7

ಕಸ ತೆರವು ಕಾರ್ಯ ಆರಂಭ

Published:
Updated:
Prajavani

ಕೊಳ್ಳೇಗಾಲ: ನಗರದ ಎಲ್ಲೆಂದರಲ್ಲಿ ರಾಶಿ ಬಿದ್ದಿರುವ ಕಸವನ್ನು ತೆರವುಗೊಳಿಸಿರುವ ಕಾರ್ಯವನ್ನು ನಗರಸಭೆ ಆರಂಭಿಸಿದೆ.

ನಗರದಲ್ಲಿ ತ್ಯಾಜ್ಯ ಅವ್ಯವಸ್ಥೆಯ ಕುರಿತಾಗಿ ‘ಪ್ರಜಾವಾಣಿ’ಯ ಜನವರಿ 14ರ ಸಂಚಿಕೆಯಲ್ಲಿ ‘ಕೊಳ್ಳೇಗಾಲ ಈಗ ‘ಕೊಳೆ’ನಗರ’ ಎಂಬ ಶೀರ್ಷಿಕೆ ಅಡಿಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತಿರುವ ನಗರಸಭೆ ತ್ಯಾಜ್ಯ ತೆರವುಗೊಳಿಸಲು ಆರಂಭಿಸಿದೆ.

ಕಟ್ಟುನಿಟ್ಟಿನ ಸೂಚನೆ: ಇದರ ಜೊತೆಗೆ ಕಸವನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಹಾಕುವಂತಿಲ್ಲ ಎಂದು ಜನರಿಗೆ ಕಟ್ಟುನಿಟ್ಟುನ ಸೂಚನೆ ನೀಡಿದೆ. 

‘ಕಸ ಸಂಗ್ರಹಿಸುವ ವಾಹನ ಮನೆಗಳ ಮುಂದೆ ಬರುತ್ತದೆ. ಆ ಸಂದರ್ಭದಲ್ಲಿ ನಿವಾಸಿಗಳು ಮನೆಯ ಕಸಗಳನ್ನು ವಾಹನಗಳಿಗೆ ಹಾಕಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಇಡಲಾಗಿರುವ ತೊಟ್ಟಿಯಲ್ಲೇ ತ್ಯಾಜ್ಯವನ್ನು ಹಾಕಬೇಕು. ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು’ ಎಂದು ನಗರಸಭೆಯ ಪರಿಸರ ಎಂಜಿನಿಯರ್‌ ಧನಂಜಯ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !