ಸೋಮವಾರ, ಮೇ 23, 2022
24 °C

ಕಾವೇರಿ ನೀರಿನ ಪೈಪ್‌ ದುರಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರದ ಸಂತೇಮರಹಳ್ಳಿ ರಸ್ತೆಯಲ್ಲಿ (ರಾಷ್ಟ್ರೀಯ ಹೆದ್ದಾರಿ) ಹಾದು ಹೋಗಿರುವ ಕಾವೇರಿ ಕುಡಿಯುವ ನೀರಿನ ಪೈಪ್‌ನಲ್ಲಿ ಕಂಡು ಬಂದಿದ್ದ ಸೋರಿಕೆಯನ್ನು (ಸಾರ್ವಜನಿಕ ಶೌಚಾಲಯದ ಎದುರು) ನಗರಸಭೆ ಕೊನೆಗೂ ದುರಸ್ತಿ ಮಾಡಿದೆ. 

‘ಪ್ರಜಾವಾಣಿ’ಯ ಏಪ್ರಿಲ್‌ 29ರ ಸಂಚಿಕೆಯ ‘ನಗರ ಸಂಚಾರ’ ಅಂಕಣದಲ್ಲಿ ಹಲವು ವಾರಗಳ ಹಿಂದೆ ಸೋರಿಕೆ ಕಂಡು ಬಂದಿದ್ದರೂ ಪೈಪ್‌ ದುರಸ್ತಿ ಮಾಡದೆ ಇದ್ದುದರಿಂದ ಜನರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಪ್ರಸ್ತಾಪಿಸಲಾಗಿತ್ತು. ‘ವ್ಯರ್ಥವಾಗುತ್ತಿದೆ ಕಾವೇರಿ ನೀರು’ ಎಂಬ ಶೀರ್ಷಿಕೆ ಅಡಿಯಲ್ಲಿ ಸ್ಥಳೀಯರ ಅಭಿಪ್ರಾಯಗಳ ಸಮೇತ ವರದಿ ಪ್ರಕಟಿಸಲಾಗಿತ್ತು.

ಇದರಿಂದ ಎಚ್ಚೆತ್ತುಕೊಂಡಿರುವ ನಗರಸಭೆ ಆಡಳಿತ ಕೆಲ ದಿನಗಳ ಹಿಂದೆ ಪೈಪ್‌ ದುರಸ್ತಿ ಮಾಡಿದೆ. ನೀರು ಸೋರಿಕೆಯಾಗುತ್ತಿದ್ದ ಸ್ಥಳದಲ್ಲಿ ಅಗೆಯಲಾಗಿದ್ದ ಗುಂಡಿಯನ್ನೂ ಮುಚ್ಚಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.