ಸೋಮವಾರ, 16 ಫೆಬ್ರುವರಿ 2026
×
ADVERTISEMENT
Bootstrap demo
Associate Sponsor

TV Partner
Knowledge Partner

ಆಸಕ್ತಿಕರ ಪ್ರಶ್ನೆಗಳು, ಅಮೂಲ್ಯ ಬಹುಮಾನಗಳು, ನೀವು ಸಿದ್ಧರಿದ್ದೀರಾ?

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿ ವಿದ್ಯಾರ್ಥಿಯೂ ಕಲಿಕೆಯಲ್ಲಿ ಮುಂದಿರುವುದು ಅನಿವಾರ್ಯವಾಗಿದೆ. ಭವಿಷ್ಯದ ನಾಗರಿಕರಾಗಿ ಬೆಳೆಯಲು ಸೂಕ್ತ ಸಮಯದಲ್ಲಿ ಆರೋಗ್ಯಕರ ಸ್ಪರ್ಧೆಗಳಲ್ಲಿ ಭಾಗವಹಿಸುವಂತಾಗಬೇಕು.

ಶಾಲಾದಿನಗಳ ಪಠ್ಯಕ್ರಮದ ಹೊರತಾಗಿಯೂ ಕನ್ನಡ ನಾಡಿನ ಅತ್ಯಂತ ವಿಶ್ವಾಸಾರ್ಹ ಪತ್ರಿಕೆ ಪ್ರಜಾವಾಣಿಯು ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಒರೆಗೆ ಹಚ್ಚುವ, ಜಾಣ್ಮೆಯನ್ನು ಇನ್ನಷ್ಟು ಪ್ರಖರಗೊಳಿಸುವ ವೇದಿಕೆಯೊಂದನ್ನು ಸೃಷ್ಟಿಸಿದೆ.

ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್ ಶಿಪ್ 7, 8, 9, ಮತ್ತು 10 ನೇ ತರಗತಿಯ ಮಕ್ಕಳಿಗೆ ರಾಜ್ಯದಾದ್ಯಂತ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗುತ್ತಿದೆ.

ಪಠ್ಯಕ್ರಮದ ಹೊರತಾಗಿಯೂ ವಿದ್ಯಾರ್ಥಿಯ ಜ್ಞಾನ, ಜಾಣ್ಮೆ ಹಾಗೂ ಚುರುಕುತನವನ್ನು ಪರೀಕ್ಷೆಗೆ ಒಡ್ಡುವ ಈ ರಸಪ್ರಶ್ನೆ ಎಂದಿನಂತೆ ಈ ಸಲವೂ ಆರು ವಲಯಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಆರೂ ವಲಯಗಳಲ್ಲಿ ವಿಜೇತವಾದ ತಂಡಗಳು ಬೆಂಗಳೂರಿನಲ್ಲಿ ಹಮ್ಮಿಕೊಳ್ಳುವ ಅಂತಿಮ ಹಣಾಹಣಿಯಲ್ಲಿ ಪಾಲ್ಗೊಳ್ಳಲಿವೆ.

ವಲಯವಾರು ವಿವರಗಳು

ಕಲಬುರಗಿ 9th Dec’ 24
ಎಸ ಎವ್ ಪಂಡಿತ್ ರಂಗಮಂದಿರ, ಎಂ ಜಿ ರಸ್ತೆ, ಬ್ರಹ್ಮಪುರ, ಕಲಬುರಗಿ.
ಸಮಯ: ಬೆಳ್ಳಿಗ್ಗೆ 9 ಗಂಟೆಗೆ

ಬಾಗಲಕೋಟೆ 10th Dec’ 24
ಕಲಾಭವನ, ಸೆಕ್ಟರ್ 19, ನವನಗರ, ಬಾಗಲಕೋಟೆ.
ಸಮಯ: ಬೆಳ್ಳಿಗ್ಗೆ 9 ಗಂಟೆಗೆ

ಹುಬ್ಬಳ್ಳಿ 11th Dec’ 24
ಸವಾಯಿ ಗಂಧರ್ವ ಕಲಾ ಮಂದಿರ, ದೇಶಪಾಂಡೆ ನಗರ, ಹುಬ್ಬಳ್ಳಿ.
ಸಮಯ: ಬೆಳ್ಳಿಗ್ಗೆ 9 ಗಂಟೆಗೆ

ದಾವಣಗೆರೆ 12th Dec’ 24
ಕನ್ನಡ ಭವನ, ವಿದ್ಯಾನಗರ ಮುಖ್ಯ ರಸ್ತೆ, ದಾವಣಗೆರೆ.
ಸಮಯ: ಬೆಳ್ಳಿಗ್ಗೆ 9 ಗಂಟೆಗೆ

ಮೈಸೂರು 13th Dec’ 24
ಗೋವಿಂದ್ ರಾವ್ ಮೆಮೋರಿಯಲ್ ಹಾಲ್, ದೇವರಾಜ್ ಮೊಹಲ್ಲಾ, CFTRI ಕ್ಯಾಂಪಸ್, ಕಜ್ಜಿಹುಂಡಿ, ಮೈಸೂರು.
ಸಮಯ: ಬೆಳ್ಳಿಗ್ಗೆ 9 ಗಂಟೆಗೆ

ಬೆಂಗಳೂರು 16th Dec’ 24
ವಿವೇಕ ಸಭಾಂಗಣ, ಯುವಪಥ, ಜಯನಗರ ೪ನೇ ಬ್ಲಾಕ್, ಬೆಂಗಳೂರು.
ಸಮಯ: ಬೆಳ್ಳಿಗ್ಗೆ 9 ಗಂಟೆಗೆ

ಪ್ರ ಕ್ರಿಯೆ:

  • ಶಾಲಾ ತಂಡಗಳಿಂದ ನೋಂದಣಿ
  • ಮೊದಲ ಹಂತದ ಲಿಖಿತ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು
  • ಪ್ರತಿ ವಲಯದಲ್ಲಿಯೂ ಆರು ತಂಡಗಳು ಅಂತಿಮ ಸುತ್ತಿಗೆ ಆಯ್ಕೆಯಾಗುವವು, ಆರೂ ವಲಯಗಳಲ್ಲಿ ವಿಜೇತವಾದ ತಂಡಗಳು ರಾಜ್ಯಮಟ್ಟದ ಅಂತಿಮ ಸುತ್ತಿಗೆ ಆಯ್ಕೆಯಾಗುವವು
  • ಅಂತಿಮ ಹಂತಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಾಗಾರ
  • ರಾಜ್ಯ ಮಟ್ಟದ ಅಂತಿಮ ಸ್ಪರ್ಧೆ ಬೆಂಗಳೂರಿನಲ್ಲಿ ಇರುವುದು

Terms & Conditions