ಆಸಕ್ತಿಕರ ಪ್ರಶ್ನೆಗಳು, ಅಮೂಲ್ಯ ಬಹುಮಾನಗಳು, ನೀವು ಸಿದ್ಧರಿದ್ದೀರಾ?
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿ ವಿದ್ಯಾರ್ಥಿಯೂ ಕಲಿಕೆಯಲ್ಲಿ ಮುಂದಿರುವುದು ಅನಿವಾರ್ಯವಾಗಿದೆ. ಭವಿಷ್ಯದ ನಾಗರಿಕರಾಗಿ ಬೆಳೆಯಲು ಸೂಕ್ತ ಸಮಯದಲ್ಲಿ ಆರೋಗ್ಯಕರ ಸ್ಪರ್ಧೆಗಳಲ್ಲಿ ಭಾಗವಹಿಸುವಂತಾಗಬೇಕು.
ಶಾಲಾದಿನಗಳ ಪಠ್ಯಕ್ರಮದ ಹೊರತಾಗಿಯೂ ಕನ್ನಡ ನಾಡಿನ ಅತ್ಯಂತ ವಿಶ್ವಾಸಾರ್ಹ ಪತ್ರಿಕೆ ಪ್ರಜಾವಾಣಿಯು ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಒರೆಗೆ ಹಚ್ಚುವ, ಜಾಣ್ಮೆಯನ್ನು ಇನ್ನಷ್ಟು ಪ್ರಖರಗೊಳಿಸುವ ವೇದಿಕೆಯೊಂದನ್ನು ಸೃಷ್ಟಿಸಿದೆ.
ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್ ಶಿಪ್ 7, 8, 9, ಮತ್ತು 10 ನೇ ತರಗತಿಯ ಮಕ್ಕಳಿಗೆ ರಾಜ್ಯದಾದ್ಯಂತ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗುತ್ತಿದೆ.
ಪಠ್ಯಕ್ರಮದ ಹೊರತಾಗಿಯೂ ವಿದ್ಯಾರ್ಥಿಯ ಜ್ಞಾನ, ಜಾಣ್ಮೆ ಹಾಗೂ ಚುರುಕುತನವನ್ನು ಪರೀಕ್ಷೆಗೆ ಒಡ್ಡುವ ಈ ರಸಪ್ರಶ್ನೆ ಎಂದಿನಂತೆ ಈ ಸಲವೂ ಆರು ವಲಯಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಆರೂ ವಲಯಗಳಲ್ಲಿ ವಿಜೇತವಾದ ತಂಡಗಳು ಬೆಂಗಳೂರಿನಲ್ಲಿ ಹಮ್ಮಿಕೊಳ್ಳುವ ಅಂತಿಮ ಹಣಾಹಣಿಯಲ್ಲಿ ಪಾಲ್ಗೊಳ್ಳಲಿವೆ.
ವಲಯವಾರು ವಿವರಗಳು
ಬಿದರ್
8th ಡಿಸೆಂಬರ್
ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರ, ದೇವಿ ಕಾಲನಿ, ಬ್ಯಾಂಕ್ ಕಾಲನಿ, ಬಿದರ್, ಕರ್ನಾಟಕ 585401
ಬಾಗಲಕೋಟೆ
9th ಡಿಸೆಂಬರ್
ಕಲಾ ಭವನ್, ಸೆಕ್ಟರ್ ನಂ. 19, ನವನಗರ, ಬಾಗಲಕೋಟೆ, ಕರ್ನಾಟಕ 587103
ಹುಬ್ಬಳ್ಳಿ
10th ಡಿಸೆಂಬರ್
ಸವಾಯಿ ಗಂಧರ್ವ ಹಾಲ್, ದೇಶಪಾಂಡೆ ನಗರ, ಹುಬ್ಬಳ್ಳಿ, ಕರ್ನಾಟಕ 580029
ದಾವಣಗೆರೆ
11th ಡಿಸೆಂಬರ್
ಕುವೆಂಪು ಕನ್ನಡ ಭವನ, ವಿದ್ಯಾನಗರ ಮುಖ್ಯ ರಸ್ತೆ, ದಾವಣಗೆರೆ, ಕರ್ನಾಟಕ 577005
ಮೈಸೂರು
12th ಡಿಸೆಂಬರ್
ವಿಜ್ಞಾನ ಭವನ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ಕರ್ನಾಟಕ 570006
ಬೆಂಗಳೂರು
15th ಡಿಸೆಂಬರ್
ಆರ್ವಿ ಆಡಿಟೋರಿಯಂ (ಆರ್ವಿ ಟೀಚರ್ಸ್ ಕಾಲೇಜ್), ರಾಷ್ಟೀಯ ವಿದ್ಯಾಲಯ ರಸ್ತೆ, 2ನೇ ಬ್ಲಾಕ್, ಜಯನಗರ, ಬೇಬಿ ಡಾಲ್ನೆ,
ಬೆಂಗಳೂರು, ಕರ್ನಾಟಕ 560011
ಪ್ರ ಕ್ರಿಯೆ: