ಮೌಲ್ಯಾಧಾರಿತ ಶಿಕ್ಷಣಕ್ಕಾಗಿ ಕಂಪ್ಯೂಟರ್‌ ಲ್ಯಾಬ್‌

7
ಕಂಪ್ಯೂಟರ್ ಲ್ಯಾಬ್ ಉದ್ಘಾಟನಾ ಸಮಾರಂಭದಲ್ಲಿ ಎಲ್‌.ಕಾಳಪ್ಪ ಅನಿಸಿಕೆ

ಮೌಲ್ಯಾಧಾರಿತ ಶಿಕ್ಷಣಕ್ಕಾಗಿ ಕಂಪ್ಯೂಟರ್‌ ಲ್ಯಾಬ್‌

Published:
Updated:
Deccan Herald

ಶಿಡ್ಲಘಟ್ಟ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪಟ್ಟಣ ಪ್ರದೇಶದ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಲು ಉತ್ತಮ ಅಧುನಿಕ ಸೌಲಭ್ಯದ ಕಂಪ್ಯೂಟರ್ ಲ್ಯಾಬ್ ಅಗತ್ಯವಿದ್ದು, ದಾನಿಗಳ ಸಹಕಾರದಿಂದ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ರೂಪಿಸಿದ್ದೇವೆ ಎಂದು ಭಕ್ತರಹಳ್ಳಿಯ ಬಿ.ಎಂ.ವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಲ್‌.ಕಾಳಪ್ಪ ತಿಳಿಸಿದರು.

ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ರೂಪಿಸಲಾದ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಮಕ್ಕಳು ನಗರದ ಪ್ರತಿಷ್ಠಿತ ಶಾಲೆಗಳ ಮಕ್ಕಳೊಂದಿಗೆ ಸ್ಪರ್ಧಿಸಲು ಕಂಪ್ಯೂಟರ್ ಬಳಕೆ, ಕಲಿಕೆ ಅಗತ್ಯ. ಮೌಲ್ಯಾಧಾರಿತ ಶಿಕ್ಷಣ ನೀಡುವ ಉದ್ದೇಶ ನಮ್ಮದು. ಮಕ್ಕಳು ಅಭಿವ್ಯಕ್ತಿಸಲು ಕಲಿಯುವುದು ಬಹಳ ಮುಖ್ಯ. ಪ್ರತಿಯೊಬ್ಬ ವಿದ್ಯಾರ್ಥಿಯೂ ಶಾಲೆಯ ಆಡಳಿತ ಮಂಡಳಿಯವರೊಂದಿಗೆ ಇ–ಮೇಲ್ ಮೂಲಕ ಸಂಪರ್ಕಿಸಬೇಕು. ತಮ್ಮ ಭಾವನೆಯನ್ನು, ಪ್ರಗತಿಯನ್ನು, ಕಲಿಕೆಯನ್ನು, ಶಾಲೆಯ ಪರಿಸರ, ಸಸ್ಯ, ಹಕ್ಕಿ, ಚಿಟ್ಟೆ, ಕೀಟ ಎಲ್ಲವುಗಳನ್ನೂ ಕಂಡು ಅನುಭವಗಳನ್ನು ಪದಗಳನ್ನಾಗಿಸಬೇಕು. ಅದಕ್ಕೂ ಕಂಪ್ಯೂಟರ್ ಬಳಕೆಯಾಗಬೇಕು ಎಂದು ಹೇಳಿದರು.

ಶಾಲೆಯಲ್ಲಿ ರೋಟರಿ ಇಂಟರಾಕ್ಟ್ ಕ್ಲಬ್ ಪ್ರಾರಂಭಿಸುವ ಮೂಲಕ ಮಕ್ಕಳಲ್ಲಿ ಸೇವಾ ಮನೋಭಾವ, ದೇಶ ಪ್ರೇಮ, ಪರಿಸರ ಕಾಳಜಿ ಮತ್ತು ಇತರರಿಗೆ ಕೊಡುವ ಮನೋಭಾವವನ್ನು ಬೆಳೆಸುವಲ್ಲಿ ಯಶಸ್ವಿಯಾಗಿದ್ದೇವೆ. ರೋಟರಿ ಚಟುವಟಿಕೆಗಳಲ್ಲಿ ಎಳೆಯ ವಯಸ್ಸಿನಿಂದಲೇ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಸಾಮರ್ಥ್ಯ ವೃದ್ಧಿ ಹಾಗೂ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ ಎಂದು ಹೇಳಿದರು.

ನಮ್ಮ ವಿದ್ಯಾರ್ಥಿಗಳು ರೋಟರಿ ಇಂಟರಾಕ್ಟ್ ಕ್ಲಬ್‌ನ ಅಡಿಯಲ್ಲಿ ಕಳೆದ 3 ವರ್ಷಗಳಿಂದ ಪಲ್ಸ್‌ ಪೋಲಿಯೋ, ಸ್ವಚ್ಛ ಗ್ರಾಮ, ಮುಷ್ಠಿ ತುಂಬಾ ಅಕ್ಕಿ ಮತ್ತು ರಾಗಿ ಯೋಜನೆ, ಕ್ಷಯ, ಕ್ಯಾನ್ಸರ್‌ ರೋಗಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ವೃದ್ಧಾಶ್ರಮಗಳಿಗೆ ಬಟ್ಟೆ ವಿತರಿಸುತ್ತಿದ್ದಾರೆ ಎಂದು ಹೇಳಿದರು.

ಬಿ.ಎಂ.ವಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಟ್ರಸ್ಟಿ ಎಸ್‌.ನಾರಾಯಣಸ್ವಾಮಿ ಮಾತನಾಡಿ, ಬೆಂಗಳೂರಿನ ಬಿ.ಎನ್.ಎಂ. ಸಂಸ್ಥೆಯ ಕಾರ್ಯದರ್ಶಿ ಬಿ.ನಾರಾಯಣರಾವ್ ಮಾನೆ ನಮ್ಮ ಮಕ್ಕಳಿಗಾಗಿ 12 ಕಂಪ್ಯೂಟರ್ ಕೊಡಿಸಿದ್ದಾರೆ. ನಮ್ಮ ಸಂಸ್ಥೆಯಿಂದ 5 ಕಂಪ್ಯೂಟರ್ ಸೇರಿಸಿ ಒಟ್ಟು 17 ಕಂಪ್ಯೂಟರ್‌ಗಳಿರುವ ಉತ್ತಮ ಲ್ಯಾಬ್ ರೂಪಿಸಿದ್ದೇವೆ. ದಾನಿಗಳ ಸಹಾಯದಿಂದ ಉತ್ತಮ ಟಿ.ವಿ ಸಹ ಇದರಲ್ಲಿರಿಸಿದ್ದು, ಮಕ್ಕಳು ಪಾಠವನ್ನು ವೀಡಿಯೋಗಳ ಮೂಲಕ ನೋಡಿ ಹೆಚ್ಚು ಪರಿಣಾಮಕಾರಿಯಾಗಿ ಕಲಿಯಲಿದ್ದಾರೆ ಎಂದರು.

ಶಾಲೆಯ ಆವರಣದಲ್ಲಿ ಚತುರ್ಭುಜ ಕೈತೋಟವನ್ನು ರೂಪಿಸುತ್ತಿದ್ದು, ಮಕ್ಕಳೇ ಬಿಸಿಯೂಟಕ್ಕೆ ಬೇಕಾಗುವ ತರಕಾರಿಗಳನ್ನು ಬೆಳೆಯಲಿದ್ದಾರೆ. ಈಗಾಗಲೇ ಪರಿಸರ ಸ್ನೇಹಿಯಾಗಿರುವ ಶಾಲೆಯ ಆವರಣದಲ್ಲಿ ಐವತ್ತಕ್ಕೂ ಹೆಚ್ಚಿನ ವಿಧದ ಗಿಡ ಮರಗಳಿವೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !