ಪ್ರಜಾವಾಣಿ ಕ್ವಿಜ್ 36

7

ಪ್ರಜಾವಾಣಿ ಕ್ವಿಜ್ 36

Published:
Updated:

1. ಹ್ಯಾಲಿ ಧೂಮಕೇತು ಕಳೆದ ಬಾರಿ ಕಾಣಿಸಿಕೊಂಡಿದ್ದು ಯಾವ ವರ್ಷ?

ಅ) 1968 ಆ) 1986 ಇ) 1981 ಈ) 1996

2. ಕಾಳಿದಾಸನ ಬಗ್ಗೆ ಉಲ್ಲೇಖವಿರುವ ಶಾಸನ ಕರ್ನಾಟಕದ ಯಾವ ಊರಿನಲ್ಲಿದೆ?

ಅ) ಹಂಪಿ ಆ) ಬಾದಾಮಿ ಇ) ಐಹೊಳೆ ಈ) ಹರಿಹರ

3. ಹ್ಯಾರಿ ಪಾಟರ್ ಸರಣಿಯ ಚಲನಚಿತ್ರಗಳಲ್ಲಿ ಪಾಟರ್‌ನ ಪಾತ್ರವಹಿಸಿರುವ ನಟ ಯಾರು?

ಅ) ಡ್ಯಾನಿಯಲ್ ರ್ಯಾಡ್‍ಕ್ಲಿಫ್ ಆ) ರೂಪರ್ಟ್ ಗ್ರಿಂಟ್ 
ಇ) ಹ್ಯಾರಿ ಟೇಲರ್ ಈ) ಇಯಾನ್ ಹರ್ಟ್

4. ಅಯೋಡಿನ್‍ನ ಕೊರತೆಯು ದೇಹದ ಯಾವ ಗ್ರಂಥಿಯ ಮೇಲೆ ಪರಿಣಾಮ ಬೀರುತ್ತದೆ?

ಅ) ಅಡ್ರಿನಲಿನ್ ಆ) ಪಿಟ್ಯೂಟರಿ ಇ) ಬೆವರು ಈ) ಥೈರಾಯ್ಡ್‌

5. ‘ಅಮೃತ ಮತ್ತು ಗರುಡ’ ಯಾರು ಬರೆದ ಕೃತಿ?

ಅ) ಡಿ. ಆರ್. ನಾಗರಾಜ್  ಆ) ಟಿ.ಪಿ. ಅಶೋಕ 
ಇ) ಜಿ.ಎಸ್. ಆಮೂರ  ಈ) ಗಿರಡ್ಡಿ ಗೋವಿಂದ ರಾಜ

6. ಗಾಂಧೀಜಿಯವರು 1922ರಲ್ಲಿ ಯಾವ ‍ಪ್ರದೇಶದಲ್ಲಿ ನಡೆದ ಘಟನೆಯಿಂದ ನೊಂದು ಅಹಿಂಸಾ ಸತ್ಯಾಗ್ರಹವನ್ನು ನಿಲ್ಲಿಸಿದರು?

ಅ) ಚಂಪಾರಣ್ ಆ) ಚೌರಿಚೌರ 
ಇ) ಬಾರ್ಡೋಲಿ ಈ) ನೌಖಾಲಿ

7. ಈಗ ಸಾಮಾನ್ಯವಾಗಿ ಬಳಕೆಯಲ್ಲಿರುವ ಕ್ಯಾಲೆಂಡರನ್ನು ಜಾರಿಗೆ ತಂದವರಾರು?

ಅ) ಪೋಪ್ ಜಾನ್ ಪಾಲ್ ಆ) ಜೂಲಿಯಸ್ ಸೀಸರ್ 
ಇ) 13ನೇ ಪೋಪ್ ಗ್ರೆಗೊರಿ ಈ) ಪೋಪ್ ಬೆನೆಡಿಕ್ಟ್

8. ವಡಗಲೆ ಮತ್ತು ತೆಂಗಲೆ ಎಂಬ ಎರಡು ಪದ್ಧತಿಗಳು ಯಾವ ಸಿದ್ಧಾಂತಕ್ಕೆ ಸಂಬಂಧಿಸಿವೆ?

ಅ) ದ್ವೈತ ಆ) ಅದ್ವೈತ 
ಇ) ಶಕ್ತಿ ವಿಶಿಷ್ಟಾದ್ವೈತ ಈ) ವಿಶಿಷ್ಟಾದ್ವೈತ

9. ಇವುಗಳಲ್ಲಿ ಯಾವುದು ಆಲೂಗಡ್ಡೆಯ ಕುಟುಂಬಕ್ಕೆ ಸೇರಿದ ತರಕಾರಿಯಲ್ಲ?

ಅ) ಟೊಮೆಟೊ ಆ) ಬದನೆ 
ಇ) ಕ್ಯಾಪ್ಸಿಕಂ ಈ) ನವಿಲುಕೋಸು

10. ಬೀರಬಲ್ ಸಹಾನಿ ಯಾವ ಕ್ಷೇತ್ರದ ಪ್ರಸಿದ್ಧ ವಿಜ್ಞಾನಿ?

ಅ) ರಸಾಯನಶಾಸ್ತ್ರ →ಆ) ಪ್ರಾಣಿಶಾಸ್ತ್ರ 
ಇ) ಸಸ್ಯಶಾಸ್ತ್ರ →ಈ) ಭೌತಶಾಸ್ತ್ರ

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಕಲಬುರ್ಗಿ 2. ಲಕ್ಕಣ ದಂಡೇಶ 3. ಸ್ಟೀವಿಯಾ 
4. ಮೈಕಲ್ ಏಂಜಲೋ 5. ಉರ್ದು 
6. ಬ್ರಹ್ಮಪುತ್ರ 7. ಶಾತವಾಹನ 8. ಪೀಟರ್ ಸ್ನೋ 
9. ಕರದಂಟು 10. ಎಪ್ಪತ್ತೆಂಟು ವರ್ಷ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !