‘ಪಾಕ್ ಕಪ್ಪುಪ‍ಟ್ಟಿಗೆ ಸೇರಿದರೆ ₹ 68 ಸಾವಿರ ಕೋಟಿ ನಷ್ಟ’

ಶುಕ್ರವಾರ, ಏಪ್ರಿಲ್ 19, 2019
27 °C
ಭಾರತದ ವಿರುದ್ಧ ಪಾಕ್‌ ವಿದೇಶಾಂಗ ಸಚಿವ ಖುರೇಷಿ ಕಿಡಿ

‘ಪಾಕ್ ಕಪ್ಪುಪ‍ಟ್ಟಿಗೆ ಸೇರಿದರೆ ₹ 68 ಸಾವಿರ ಕೋಟಿ ನಷ್ಟ’

Published:
Updated:

ಲಾಹೋರ್‌ (ಪಿಟಿಐ): ‘ಜಾಗತಿಕ ವೀಕ್ಷಣಾ ಪಡೆಯಾದ ಆರ್ಥಿಕ ಕ್ರಿಯಾ ನಿರ್ವಹಣಾ ಪಡೆಯು (ಎಫ್‌ಎಟಿಎಫ್‌) ದೇಶವನ್ನು ಕಪ್ಪುಪಟ್ಟಿಗೆ ಸೇರಿಸಿದ್ದೇ ಆದಲ್ಲಿ ವಾರ್ಷಿಕ ₹ 68 ಸಾವಿರ ಕೋಟಿ ನಷ್ಟವಾಗಲಿದೆ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್‌ ಖುರೇಷಿ ಹೇಳಿದ್ದಾರೆ.

ಇಲ್ಲಿನ ರಾಜ್ಯಪಾಲರ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಎಫ್‌ಎಟಿಎಫ್‌ ಮೇಲೆ ಭಾರತ ನಿರಂತರ ಒತ್ತಡ ಹೇರುತ್ತಿದೆ. ಇದು ಜಾರಿಯಾದರೆ ದೇಶಕ್ಕೆ ಆರ್ಥಿಕವಾಗಿ ಭಾರಿ ಸಂಕಷ್ಟ ತಪ್ಪದು’ ಎಂದು ಹೇಳಿದರು.

ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುತ್ತಿರುವುದರ ಮೇಲೆ ನಿಗಾ ಇಡುವ ಪ್ಯಾರಿಸ್‌ ಮೂಲದ ಅಂತರ
ರಾಷ್ಟ್ರೀಯ ಸಂಸ್ಥೆಯಾದ ಎಫ್‌ಎಟಿಎಫ್‌, ‘ನಿಷೇಧಿಸಲಾಗಿರುವ ಉಗ್ರ ಸಂಘಟನೆಗಳ ಕಾರ್ಯಾಚರಣೆ ಮೇಲೆ ನಿಗಾ ಇಡುವಂತೆ ಕಳೆದ ವರ್ಷ ಜೂನ್‌ನಲ್ಲಿ ಸೂಚಿಸಿತ್ತು.

‘ಭಯೋತ್ಪಾದನಾ ಸಂಘಟನೆಗಳಿಗೆ ಹಣಕಾಸು ನೆರವು ನೀಡುವುದನ್ನು ನಿಲ್ಲಿಸುವುದು ಹಾಗೂ ಅವುಗಳ ಚಟುವಟಿಕೆಯನ್ನು ನಿಗ್ರಹಿಸಲು ಕೈಗೊಂಡ ಕ್ರಮಗಳು ತೃಪ್ತಿದಾಯಕವಾಗಿಲ್ಲ’ ಎಂದು ಎಫ್‌ಎಟಿಎಫ್‌ನ ಅಂಗಸಂಸ್ಥೆ ಎಪಿಜಿ ಅಸಮಾಧಾನ ವ್ಯಕ್ತಪಡಿಸಿತ್ತು.

ಮಾರ್ಚ್‌ ಕೊನೆ ವಾರ ಇಸ್ಲಾಮಾಬಾದ್‌ಗೆ ಭೇಟಿ ನೀಡಿದ್ದ ಎಪಿಜಿ ನಿಯೋಗ, ‘ಗ್ರಾಮೀಣ ಹಾಗೂ ಜಿಲ್ಲಾ ಮಟ್ಟದಿಂದ ಹಿಡಿದು ಪ್ರಾಂತೀಯ ಹಂತದವರೆಗೂ ಈ ನಿಷೇಧಿತ ಸಂಘಟನೆಗಳು ಸಕ್ರಿಯವಾಗಿವೆ. ಈಗಲೂ ದೇಶದ ವಿವಿಧೆಡೆ ರ‍್ಯಾಲಿಗಳನ್ನು ಆಯೋಜಿ
ಸುತ್ತಿವೆ’ ಎಂದು ವರದಿ ನೀಡಿತ್ತು.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !