‘ಸೂಪರ್ ಸ್ಟಾರ್’ ಕೆನ್ನೆಗೆ ಬಾರಿಸಿದ್ದ ರಾಧಿಕಾ!

7
Radhika apte

‘ಸೂಪರ್ ಸ್ಟಾರ್’ ಕೆನ್ನೆಗೆ ಬಾರಿಸಿದ್ದ ರಾಧಿಕಾ!

Published:
Updated:
Deccan Herald

ಪುರುಷ ಪ್ರಧಾನವಾಗಿರುವ ಸಿನಿಮಾ ಉದ್ಯಮದ ಬಗ್ಗೆ ಈ ಹಿಂದೆ ಬಾಲಿವುಡ್ ನಟಿ ರಾಧಿಕಾ ಆಪ್ಟೆ ಕೆಂಡಕಾರಿದ್ದರು. ಆಗ ಅವರ ವಿರುದ್ಧ ಆದ ಟ್ರೋಲ್‌ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದ ರಾಧಿಕಾ, ದಕ್ಷಿಣ ಭಾರತದ ‘ಸೂಪರ್ ಸ್ಟಾರ್’ ಒಬ್ಬರ ಕೆನ್ನೆಗೆ ಬಾರಿಸಿದ್ದ ಪ್ರಕರಣವನ್ನು ನೆನಪಿಸಿಕೊಂಡಿದ್ದಾರೆ.

‘ದಕ್ಷಿಣ ಭಾರತದ ಸಿನಿಮಾವೊಂದರ ಚಿತ್ರೀಕರಣವಿತ್ತು. ಅದು ಮೊದಲ ದಿನದ ಚಿತ್ರೀಕರಣ. ಸೆಟ್‌ನಲ್ಲಿ ಕುಳಿತಿದ್ದಾಗ ದಕ್ಷಿಣ ಭಾರತದ ಖ್ಯಾತ ನಟನೊಬ್ಬ ತನ್ನ ಕಾಲ್ಬೆರಳಿನ ಮೂಲಕ ನನ್ನ ಕಾಲನ್ನು ತಾಗಿಸುತ್ತಿದ್ದ. ಅದುವರೆಗೂ ಅವರ ಪರಿಚಯವೇ ನನಗಿರಲಿಲ್ಲ. ಈ ಹಿಂದೆಯೂ ಅವರನ್ನು ಭೇಟಿಯಾಗಿರಲಿಲ್ಲ. ತಕ್ಷಣವೇ ಅವರ ಕೆನ್ನೆಗೆ ಜೋರಾಗಿ ಬಾರಿಸಿದೆ ಅಷ್ಟೇ’ ಎಂದು ರಾಧಿಕಾ ಮುಕ್ತವಾಗಿಯೇ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

’ಬಾಜಾರ್’ ಮತ್ತು ಹಾಲಿವುಡ್‌ನಲ್ಲಿ ‘ದಿ ಆಶ್ರಮ್’ ಎನ್ನುವ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಾಧಿಕಾ ಆಪ್ಟೆ, ಕೆನ್ನೆಗೆ ಬಾರಿಸಿದ ನಟನ ಹೆಸರನ್ನು ಮಾತ್ರ ಬಹಿರಂಗ ಪಡಿಸಿಲ್ಲ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !