ಶಾರ್ಜಾ ದೊರೆ–ರಾಹುಲ್‌ ಗಾಂಧಿ ಮಾತುಕತೆ

7

ಶಾರ್ಜಾ ದೊರೆ–ರಾಹುಲ್‌ ಗಾಂಧಿ ಮಾತುಕತೆ

Published:
Updated:
Prajavani

ಶಾರ್ಜಾ: ಅರಬ್‌ ಸಂಯುಕ್ತ ಸಂಸ್ಥಾನದ (ಯುಎಇ) ಶಾರ್ಜಾಕ್ಕೆ ಭೇಟಿ ನೀಡಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಅಲ್ಲಿನ ದೊರೆ ಸುಲ್ತಾನ್‌ ಬಿನ್‌ ಮುಹಮ್ಮದ್‌ ಅಲ್‌–ಖಾಸಿಮಿ ಅವರೊಂದಿಗೆ ಭಾನುವಾರ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದರು. 

ದುಬೈ ಮತ್ತು ಅಬು ಧಾಬಿಗೆ ಇದೇ ಮೊದಲ ಬಾರಿಗೆ ಭೇಟಿ ನೀಡಿರುವ ರಾಹುಲ್‌, ದೇಶದ ಉನ್ನತ ನಾಯಕರೊಂದಿಗೆ ಮಾತುಕತೆ ನಡೆಸಿದ್ದಲ್ಲದೆ, ಅಲ್ಲಿನ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು. 

‘ಉಭಯ ದೇಶಗಳ ನಡುವಿನ ಸಂಬಂಧ ಸುಧಾರಣೆ ನಿಟ್ಟಿನಲ್ಲಿ ದೊರೆ ಖಾಸಿಮಿ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಲಾಯಿತು’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 0

  Frustrated
 • 4

  Angry

Comments:

0 comments

Write the first review for this !