ಮಳೆರಾಯನಿಗಾಗಿ ಹೆಣ್ಣು ಮಕ್ಕಳ ಮದುವೆ!

7
ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿ ಗ್ರಾಮದಲ್ಲಿ ವಿಶಿಷ್ಟ ಆಚರಣೆ

ಮಳೆರಾಯನಿಗಾಗಿ ಹೆಣ್ಣು ಮಕ್ಕಳ ಮದುವೆ!

Published:
Updated:

ಶಿಡ್ಲಘಟ್ಟ: ರೈತರ ಬದುಕಿಗೆ ಜೀವಾಳವಾದ ಮಳೆಯನ್ನು ಜನಪದರು ದೈವ ಎಂದೇ ಪರಿಗಣಿಸಿದ್ದಾರೆ. ಸಕಾಲದಲ್ಲಿ ಮಳೆ ಆದರೆ ಬೆಳೆ, ಬೆಳೆಯಾದರೆ ಬದುಕು. ಆದರೆ ಮಳೆಗಾಲ ಬಂದರೂ ಮಳೆಬಾರದಿದ್ದರೆ ರೈತರು ಮಳೆರಾಯನಲ್ಲಿ ಮೊರೆ ಇಡುತ್ತಾರೆ. ಕೃಷಿ ನಂಬಿರುವ ಗ್ರಾಮೀಣರು ಅದಕ್ಕಾಗಿ ಕೆಲವು ಆಚರಣೆಗಳನ್ನು ಮಾಡುವರು.

ಮಳೆರಾಯನ ಮೆರವಣಿಗೆ, ಕಂಬಳಿ ಬೀಸುವುದು, ತುಂಬಿದ ಕೊಡ ಪೂಜೆ, ಕಪ್ಪೆ ಒನಕೆ ಮೆರವಣಿಗೆ, ನವಧಾನ್ಯದ ಪೂಜೆ, ಕಪ್ಪೆ ದ್ಯಾವರು, ಕತ್ತೆಗಳ ಮದುವೆ ಮೊದಲಾದ ಆಚರಣೆಗಳನ್ನು ಮಾಡುವರು. ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿ ಗ್ರಾಮದಲ್ಲಿ ಹೆಣ್ಣುಮಕ್ಕಳ ಮದುವೆ ಅಥವಾ ಚಿತ್ತಾರದ ಚಂದ್ರಮ ಎಂಬ ಮಳೆರಾಯನ ಪೂಜೆ ವಿಶಿಷ್ಟವಾಗಿ ಶುಕ್ರವಾರ ರಾತ್ರಿ ನಡೆಯಿತು.

ತೆಲುಗು ಪ್ರಭಾವದ ಜಿಲ್ಲೆಯಲ್ಲಿ ಈ ಆಚರಣೆ ರೂಢಿಯಲ್ಲಿದೆ. ಮಳೆ ಇಲ್ಲದೆ ಬೆಳೆ ಒಣಗಿದಾಗ ಜನಪದರು ಭಕ್ತಿಯಿಂದ ಮಳೆರಾಯನನ್ನು ಆರಾಧಿಸುವರು. ಒಂಬತ್ತು ದಿನ ಈ ಪೂಜೆ ನಡೆಯುತ್ತದೆ. ನಂತರ ಮಳೆ ಬಂದೇ ಬರುತ್ತದೆ ಎನ್ನುವ ಅಚಲವಾದ ನಂಬಿಕೆ ಗ್ರಾಮೀಣರಲ್ಲಿ ಇದೆ.

ಮಳೆರಾಯನನ್ನು ಸ್ತುತಿಸುವ ತೆಲುಗು ಪದಗಳನ್ನು ರಾಗ ಹಾಗೂ ಲಯಬದ್ಧವಾಗಿ ಹಾಡುತ್ತಾ ಗುಂಪುಗೂಡಿ ರೈತರು, ಮಕ್ಕಳು ಪ್ರತಿ ಮನೆಮನೆಗೂ ತೆರಳಿದರು. ರತಿ ಮನೆಯವರೂ ಹಸಿಟ್ಟನ್ನು (ಹಿಟ್ಟು) ನೀಡಿದರು. ಗ್ರಾಮ ದೇಗುಲದ ಬಳಿ ತಿಂಗಳ ಮಾಮ ಅಥವಾ ಚಂದ್ರನನ್ನು ರಂಗೋಲಿಯಲ್ಲಿ ಬಿಡಿಸಿ, ಹೂಗಳಿಂದ ಅಲಂಕರಿಸಿ ರೊಟ್ಟಿ ಅನ್ನ ಇಟ್ಟು ಪೂಜಿಸಿದರು. ಕೋಲಾಟ, ಹಾಡು, ಪ್ರಸಾದ ವಿತರಣೆ ಕಾರ್ಯಕ್ರಮಗಳು ನಡೆದವು. ಈ ರೀತಿ ಎಂಟು ದಿನ ಜರುಗಿತು. ಒಂಬತ್ತನೇ ದಿನ ಇಬ್ಬರು ಹೆಣ್ಣು ಮಕ್ಕಳಿಗೆ ಹಿರಿಯರು ಶಾಸ್ತ್ರಬದ್ಧವಾಗಿ ಮದುವೆ ಮಾಡಿದರು. ನಂತರ ಚಿತ್ತಾರದ ಚಂದ್ರನನ್ನು ವಿಸರ್ಜಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !