ಬಿಸಿಲಿನ ಝಳದಲ್ಲಿ ಮಳೆ ಸಿಂಚನ

ಶುಕ್ರವಾರ, ಏಪ್ರಿಲ್ 19, 2019
22 °C

ಬಿಸಿಲಿನ ಝಳದಲ್ಲಿ ಮಳೆ ಸಿಂಚನ

Published:
Updated:
Prajavani

ಬೆಂಗಳೂರು: ಬೇಸಿಗೆಯ ಬಿಸಿಲಿನ ಝಳದಿಂದ ತತ್ತರಿಸಿದ್ದ ರಾಜಧಾನಿಯ ಜನರಿಗೆ ಸೋಮವಾರ ಸಂಜೆ ಸುರಿದ ಮಳೆ ತುಸು ತಂಪೆರೆಯಿತು.

ಸೋಮವಾರ ಮಧ್ಯಾಹ್ನದಿಂದ ಮೋಡ ಮುಸುಕಿದ ವಾತಾವರಣ ಇತ್ತು. ಸಂಜೆ 5.30ರ ವೇಳೆಗೆ ಸಾಧಾರಣವಾಗಿ ಮಳೆ ಸುರಿಯಿತು. ಲಾಲ್‌ಬಾಗ್‌ ವೆಸ್ಟ್‌ ಗೇಟ್‌ ಬಳಿಯ ಮತ್ತು ಕೋರಮಂಗಲದ 1ನೇ ಬ್ಲಾಕ್‌ನಲ್ಲಿ ಕೆಲ ಮರಗಳು ನೆಲಕ್ಕುರುಳಿವೆ. 

ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಅಶೋಕನಗರ, ಟ್ರಿನಿಟಿ ವೃತ್ತ, ಮೈಸೂರು ಬ್ಯಾಂಕ್ ವೃತ್ತ, ಕೆಂಪೇಗೌಡ ರಸ್ತೆ, ಗುಟ್ಟಹಳ್ಳಿ, ಮಾರತ್ತಹಳ್ಳಿ, ಕೆ.ಆರ್.ಪುರ, ಜಯನಗರ, ಹೆಬ್ಬಾಳ, ಸಿಲ್ಕ್‌ಬೋರ್ಡ್ ಸೇರಿದಂತೆ ಹಲವೆಡೆ ಮಳೆಯಿಂದ ಸಂಚಾರ ದಟ್ಟಣೆ ಉಂಟಾಗಿತ್ತು.

‘ಮೆಜೆಸ್ಟಿಕ್, ಮಲ್ಲೇಶ್ವರ, ರಾಜಾಜಿ ನಗರ, ವಿಧಾನ ಸೌಧ, ಶಿವಾಜಿನಗರ, ಶಾಂತಿನಗರ, ಬಸವನಗುಡಿ, ಹೊಸಕೆರೆಹಳ್ಳಿ, ಚಾಮರಾಜಪೇಟೆ, ವಿಜಯನಗರ, ಮಾಗಡಿ ರಸ್ತೆ, ಪ್ರಕಾಶನಗರ, ಮಡಿವಾಳ, ಕೋರಮಂಗಲ‌ ಸೇರಿದಂತೆ ನಗರದ ಹಲವೆಡೆ ಸಾಧಾರಣ ಮಳೆ ಸುರಿದಿದೆ’ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !