ಭಾನುವಾರ, ಏಪ್ರಿಲ್ 18, 2021
23 °C

ಚಾಮರಾಜನಗರದಲ್ಲಿ ತಂಪೆರೆದ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರದಲ್ಲಿ ಬುಧವಾರ ಸಂಜೆ ಸ್ವಲ್ಪ ಹೊತ್ತು ಮಳೆಯಾಗಿ ವಾತಾವರಣ ತಂಪಾಯಿತು. ಕೆಲವು ಕಡೆ ಚೆನ್ನಾಗಿ ಮಳೆ ಬಿದ್ದರೆ, ಇನ್ನೂ ಕೆಲವು ಕಡೆ ಸಾಧಾರಣ ಮಳೆಯಾಯಿತು. 

ಮಧ್ಯಾಹ್ನ 3 ಗಂಟೆಗೆ ನಗರದೆಲ್ಲೆಡೆ ಮೋಡ ಕವಿದ ವಾತಾವರಣ ಕಂಡು ಬಂತು. ಮೂರೂವರೆ ಹೊತ್ತಿಗೆ 10 ನಿಮಿಷಗಳ ಕಾಲ ಮಳೆಯಾಯಿತು. ಸೋಮವಾರಪೇಟೆ ಹಾಗು ಸುತ್ತಮುತ್ತ ಜೋರಾಗಿಯೇ ಮಳೆ ಸುರಿಯಿತು. ರಸ್ತೆಯ ಇಕ್ಕೆಲಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯಿತು. 

ಸಂಜೆವರೆಗೂ ಮೋಡದ ವಾತಾವರಣ ಮುಂದುವರಿದು ಆರು ಗಂಟೆಯ ನಂತರ ಮತ್ತೆ ಮಳೆ ಸುರಿಯಿತು. ಅರ್ಧಗಂಟೆ ಕಾಲ‌ ಮಳೆ ಸುರಿದಿದ್ದರಿಂದ ಬಿಸಿಲಿನ ಝಳಕ್ಕೆ ಬಿಸಿಯಾಗಿದ್ದ ಹವೆ ತಂಪಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು