ಬುಧವಾರ, ನವೆಂಬರ್ 13, 2019
23 °C

ಚಾಮರಾಜನಗರದಲ್ಲಿ ಉತ್ತಮ ಮಳೆ

Published:
Updated:
Prajavani

ಚಾಮರಾಜನಗರ: ನಗರದಲ್ಲಿ ‌ಸೋಮವಾರ ಸಂಜೆ ಉತ್ತಮ ಮಳೆಯಾಯಿತು. ಸಂಜೆ 4.30ರ ಸುಮಾರಿಗೆ ತುಂತುರು ಆಗಿ ಸುರಿಯಲು ಆರಂಭಿಸಿದ ಮಳೆ ಸ್ವಲ್ಪ ಹೊತ್ತಿನ ನಂತರ ಬಿರುಸುಗೊಂಡು ರಾತ್ರಿ 7.30ರ ವರೆಗೂ ಮುಂದುವರಿಯಿತು.

ಜಿಲ್ಲೆಯ ವಿವಿಧ ಕಡೆಗಳಲ್ಲಿ ಕೆಲವು ದಿನಗಳಿಂದ ಮಳೆ ಕಣ್ಣಾಮುಚ್ಚಾಲೆಯಾಡುತ್ತಿತ್ತು. 

ಸೋಮವಾರ ಬೆಳಿಗ್ಗೆಯಿಂದಲೇ ಬಿಸಿಲಿನ ವಾತಾವರಣ ಇತ್ತು. ಮಧ್ಯಾಹ್ನ 3.30ರ ನಂತರ ಮೋಡ ಕವಿಯುವುದಕ್ಕೆ ಆರಂಭವಾಯಿತು. ಒಂದು ಗಂಟೆ ಬಳಿಕ ತುಂತುರು ಹನಿ ಬೀಳಲು ಆರಂಭಿಸಿತು. ಆರು ಗಂಟೆಯ ಹೊತ್ತಿಗೆ ಮಳೆ ಇನ್ನಷ್ಟು ಬಿರುಸು ಪಡೆಯಿತು. ಇದರಿಂದಾಗಿ ಜನ ಸಂಚಾರಕ್ಕೆ ಸ್ವಲ್ಪ ಅಡಚಣೆಯಾಯಿತು.

ಪ್ರತಿಕ್ರಿಯಿಸಿ (+)