ಗುರುವಾರ , ನವೆಂಬರ್ 14, 2019
19 °C

ಮಳೆ: ಕುಸಿದ ಮನೆ ಗೋಡೆ

Published:
Updated:
Prajavani

ಹನೂರು: ಸಮೀಪದ ಮಂಗಲ ಗ್ರಾಮದಲ್ಲಿ ಬುಧವಾರ ರಾತ್ರಿ ಸುರಿದ ಮಳೆಗೆ ಸಿದ್ದಮ್ಮ ಎಂಬುವವರ ಮನೆಯ ಗೋಡೆ ಹಾಗೂ ಚಾವಣಿ ಕುಸಿದಿದೆ.

ಕ್ಷೇತ್ರ ವ್ಯಾಪ್ತಿಯಲ್ಲಿ ಸಂಜೆ 4ರಿಂದಲೇ ಮೋಡ ಕವಿದ ವಾತಾವರಣವಿತ್ತು. ರಾತ್ರಿ ಈ ಭಾಗದ ಬಹುತೇಕ ಕಡೆ ಮಳೆಯಾಯಿತು. ಪರಿಣಾಮ ಮಂಗಲ ಗ್ರಾಮದ ಚಾವಣಿ, ಗೋಡೆ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ದಿನ ಬಳಕೆಗೆ ವಸ್ತುಗಳು ಹಾನಿಯಾಗಿವೆ.

ಪರಿಹಾರಕ್ಕೆ ಮನವಿ: ‘ನಾವು ತುಂಬಾ ಬಡವರಾಗಿದ್ದು, ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಆದರೆ ಮಳೆಯ ಪರಿಣಾಮ ಮನೆ ಗೋಡೆ ಕುಸಿದಿದ್ದು, ವಾಸಕ್ಕೆ ತುಂಬಾ ತೊಂದರೆಯಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸರ್ಕಾರದಿಂದ ಪರಿಹಾರ ಕೊಡಿಸುವಂತೆ’ ಸಿದ್ದಮ್ಮ ಮನವಿ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)