ರಾಜ್ಯದಲ್ಲಿ ಮಳೆ ಸಾಧ್ಯತೆ

ಮಂಗಳವಾರ, ಮಾರ್ಚ್ 19, 2019
21 °C

ರಾಜ್ಯದಲ್ಲಿ ಮಳೆ ಸಾಧ್ಯತೆ

Published:
Updated:

ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿದ್ದು, ಮಂಗಳವಾರ ಕೆಲವೆಡೆ ಸಣ್ಣ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

‘ಮಂಡ್ಯ, ಮೈಸೂರು, ಚಿಕ್ಕಮಗಳೂರು ಹಾಗೂ ಹಾಸನ ಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ’ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್‌.ಶ್ರೀನಿವಾಸ ರೆಡ್ಡಿ ತಿಳಿಸಿದರು. 

‘ಸೋಮವಾರ, ಕೊಡಗು 50, ಹಾಸನ ಹಾಗೂ ಚಿಕ್ಕಮಗಳೂರಿನ ವಿವಿಧೆಡೆ 10ರಿಂದ 12ಮೀ.ಮೀ ಪ್ರಮಾಣದ ಮಳೆಯಾಗಿದೆ’. ಆದರೆ, ಉತ್ತರ ಕರ್ನಾಟಕ ಭಾಗದ ಬಳ್ಳಾರಿ, ಕೊಪ್ಪಳ 39, ಕಲಬುರ್ಗಿ 38.5, ರಾಯಚೂರು 40 ಸೇರಿದಂತೆ ವಿವಿಧೆಡೆ 36 ರಿಂದ 37 ಡಿಗ್ರಿ ಸೆಲ್ಸಿಯಸ್‌ ಗರಿಷ್ಟ ತಾಪಮಾನ ದಾಖಲಾಗಿದೆ’ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದರು.  

‘ಮೇಲ್ಮೈ ಸುಳಿಗಾಳಿಯಿಂದಾಗಿ ಕಳೆದ ಎರಡು ದಿನಗಳಿಂದ ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕಳೆದ ಮೂರು ದಿನಗಳಲ್ಲಿ ಇದ್ದ ಗರಿಷ್ಟ ತಾಪಮಾನಕ್ಕೆ ಹೋಲಿಸಿದರೆ ಸದ್ಯ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ 37 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದ ಗರಿಷ್ಟ ತಾಪಮಾನ 34ಕ್ಕೆ ಇಳಿಕೆಯಾಗಿದೆ’.

‘ಆದರೆ, ಉತ್ತರ ಒಳನಾಡಿನಲ್ಲಿ ಮಾತ್ರ ವಾಡಿಕೆಗಿಂತ ಎರಡರಿಂದ ಮೂರು ಡಿಗ್ರಿ ಸೆಲ್ಸಿಯಸ್‌ನಷ್ಟು ಗರಿಷ್ಟ ತಾಪಮಾನ ಏರಿಕೆ ಕಂಡಿದೆ. ಹೈದರಾಬಾದ್‌ ಕರ್ನಾಟಕ ಭಾಗಗಳಲ್ಲಿ 41ಡಿಗ್ರಿ ಸೆಲ್ಸಿಸ್‌ನಷ್ಟು ಗರಿಷ್ಟ ತಾಪಮಾನ ದಾಖಲಾಗಿದೆ’ ಎಂದರು. 

ಎಲ್ಲಿ, ಎಷ್ಟು ಬಿಸಿಲು( ಡಿಗ್ರಿ ಸೆಲ್ಸಿಯಸ್‌ನಲ್ಲಿ)

ಬೆಂಗಳೂರು- 34

ಬಳ್ಳಾರಿ - 39

ಕೊಪ್ಪಳ - 39

ಕಲಬುರ್ಗಿ - 41

ರಾಯಚೂರು - 40

ಗದಗ - 37

ಮೈಸೂರು - 35

ಚಿತ್ರದುರ್ಗ- 36

ಬೆಳಗಾವಿ(ವಿಮಾನ ನಿಲ್ದಾಣ ಸುತ್ತಮುತ್ತ) -37

ಕಾರವಾರ - 34

ವಿಜಯಪುರ -38

ಮಡಿಕೇರಿ -29

ಧಾರವಾಡ - 36

ಬರಹ ಇಷ್ಟವಾಯಿತೆ?

 • 18

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !