ಕೇಸರಿಯಾದಲ್ಲಿ ‘ರಂಗೀಲೊ ರಾಜಸ್ಥಾನ್’

ಜೆ. ಪಿ.ನಗರದ 15ನೇ ಕ್ರಾಸ್ನಲ್ಲಿರುವ ಕೇಸರಿಯಾ ರೆಸ್ಟೋರೆಂಟ್ಗೆ ಕಾಲಿಟ್ಟರೆ ಕೇಸರಿಯ ಘಮ ನಮ್ಮನ್ನು ಸ್ವಾಗತಿಸುತ್ತದೆ.
ನಾಲ್ಕು ವರ್ಷಗಳ ಹಿಂದೆ ಆರಂಭವಾದ ರೆಸ್ಟೊರೆಂಟ್ ಈಗ ಹಬ್ಬದ ಕಳೆ ಬಂದಿದೆ. ರಾಜಸ್ಥಾನ ಶೈಲಿಯ ಅಪರೂಪದ ಅಡುಗೆಗಳನ್ನು ಮಾಡಿ ಉಣಬಡಿಸುವ ಹೋಟೆಲ್ನಲ್ಲಿ ಈಗ ‘ರಂಗೀಲೊ ರಾಜಸ್ಥಾನ ಮೇಳ’ ನಡೆಯುತ್ತಿದೆ.
ಬಿಸಿ ಬಿಸಿಯಾಗಿ ತಯಾರಿಸಿದ ಒಂದೊಂದೇ ಅಡುಗೆಯನ್ನು ತಂದು ಬಡಿಸಲಾಗುತ್ತದೆ. ಅವಸರ ಇಲ್ಲದೆ ಅರಾಮಾಗಿ ವಾರದ ರಜೆ ಕಳೆಯಲು ಬಯಸುವವರು ಇಲ್ಲಿ ಕೂತು ಊಟ ಮಾಡಬಹುದು.
ಮೇಳದಲ್ಲಿ ರಾಜಸ್ಥಾನದ ವಾತಾವರಣ ಸೃಷ್ಟಿ ಮಾಡುವ ಉದ್ದೇಶದಿಂದ ರಾಜಸ್ಥಾನದಿಂದಲೇ ಬಂದ ಕಲಾವಿದರು ಸ್ಥಳದಲ್ಲಿಯೇ ಮಡಿಕೆ ಮಾಡಿ ಕೊಡುತ್ತಾರೆ. ಬಳೆಗಳನ್ನೂ ಅಲ್ಲಿಯೇ ತಯಾರಿಸಿ ನೀಡುತ್ತಾರೆ. ರಾಜಸ್ಥಾನದ ಬುಡಕಟ್ಟು ಶೈಲಿಯ ಮೆಹೆಂದಿಯನ್ನು ಅಲ್ಲಿಯೇ ಹಾಕಲಾಗುತ್ತದೆ. ಅವರ ಶೈಲಿಯ ಪಗಡಿಯನ್ನು ಧರಿಸಿ ಸೆಲ್ಫಿ ತೆಗೆದುಕೊಳ್ಳಬಹುದು.
ಡೆಸರ್ಟ್ನಲ್ಲಿ
ಮೇಳದ ಸಮಯದಲ್ಲಿ ಮಾತ್ರ ಹೊಸದಾಗಿ ಆಲೂ ಮಟರ್ ಮಂಗೋಡಿ ಕಿ ಸಬ್ಜಿ, ಜೋಧ್ಪುರಿ ಕೋಫ್ತಾ, ಕಟ್ಟಿ ಮೀಟಿ ಕಡಿ, ಬಾರ್ಜಾ ರೋಟಿ, ರಾಮ್ ಕಿಚಡಿಯನ್ನು ಸವಿಯಬಹುದು. ರಬಡಿ, ಮೂಂಗ್ ದಾಲ್ ಹಲ್ವಾ, ಕೇಸರಿಯಾ ಅಂಗೂರ್ದನಾ ಡೆಸರ್ಟ್ನಲ್ಲಿ ಸಿಗಲಿದೆ. ಇದರಲ್ಲಿ ಬೇಕಾದ ಡೆಸರ್ಟ್ ಆಯ್ಕೆ ಮಾಡಿಕೊಳ್ಳಬಹುದು.
ಬೆಳ್ಳಿ ಬಟ್ಟಲಲ್ಲಿ ಊಟ: ರಾಜಸ್ಥಾನದ ಶೈಲಿಯ ಊಟದ ಜೊತೆಗೆ ಬೆಳ್ಳಿ ತಟ್ಟೆ ಊಟ ಮಾಡುವ ಅವಕಾಶವನ್ನು ರೆಸ್ಟೊರೆಂಟ್ ಒದಗಿಸಿದೆ. ಬೆಳ್ಳಿ ತಟ್ಟೆಯೊಂದಿಗೆ, ಲೋಟ, ಚಮಚವೂ ಬೆಳ್ಳಿಯಿಂದ ಕೂಡಿವೆ. ಪಾನೀಯಗಳನ್ನೂ ಬೆಳ್ಳಿ ಬಟ್ಟಲಿನಲ್ಲಿಯೇ ಸರ್ವ್ ಮಾಡಲಾಗುತ್ತದೆ.
ರಾಜಸ್ಥಾನ ಥಾಲಿ
ಥಾಲಿಗೂ ಮೊದಲು ನೀವು ರಾಜಸ್ಥಾನ ಶೈಲಿಯ ಪಾನಿಪೂರಿಯನ್ನು ಸವಿಯಬಹುದು. ಪಾನಿ ಪಟಾಶಾ, ಪಾಪಡಿ ಚಾಟ್, ಪಾಲಕ್ ಪಕೋಡಿ ಚಾಟ್ ಸವಿದ ಬಳಿಕ ತಾಲಿ ನಮ್ಮ ಬಳಿ ಬರುತ್ತದೆ.
ಥಾಲಿಯಲ್ಲಿ ಮೊದಲಿಗೆ ನಮಗೆ ‘ಕೇರಿ ಪುದೀನಾ’ ಸವಿಯಲು ಸಿಗುತ್ತದೆ. ಪುದೀನಾ ಹಾಗೂ ಜೀರಿಗೆ ಹಾಕಿ ಹದವಾಗಿ ಬೆರೆಸಿ ಮಾಡಿದ ಈ ಪಾನೀಯ ನಮಗೆ ಉತ್ತಮ ಆರಂಭವನ್ನು ನೀಡುತ್ತದೆ. ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ. ರುಚಿ ಕೂಡ ಅಷ್ಟೇ ಸವಿಯಾಗಿದೆ.
ನಂತರ ಥಾಲಿಯಲ್ಲಿ ಒಂದೊಂದಾಗಿಯೇ ಜೋಧ್ಪುರಿ ಕೋಫ್ತಾ, ಆಲೂ ಪ್ಯಾಜ್ ಕೀ ಕಚೋರಿ, ಮಕೈ ಕಿ ಟಕ್ಕಿ, ಕಚುಂಬರ್, ಗ್ರೀನ್ ಚಟ್ನಿ, ಕುಚರಿ ಕೀ ಚಟ್ನಿ, ಅಚಾರ್, ಪಾಪಡ್, ದಾಲ್ ಪಂಚ್ಮೇಲ್, ಪಂಚ್ಕುಟ್ಟಾ, ಸೇವ್ ಟಮಾಟರ್ ಕಿ ಸಬ್ಜಿ, ರಾಬ್ಡಿ, ಕಂಜಿ ಕಿ ಪಕೋಡಿ, ಲೆಹಸೂನಿ ದಾಲ್, ಕಟ್ಟಿ ಮೀಟಿ ಕಡಿ, ಮಿನಿ ಜಾಮೂನ್ ರಬ್ಡಿ, ಪುಲ್ಕಾ, ದಾಲ್ ಕಾ ಪರಂತಾ, ಮಸಾಲಾ ಪುರಿ, ಸ್ಟೀಮ್ಡ್ ರೈಸ್ ಸವಿದ ಬಳಿಕ ಕೊನೆಯಲ್ಲಿ ಕೇಸರಿಯಾ ಕುಲ್ಫಿ ಬರಲಿದೆ. ಇದರಲ್ಲಿ ಕೇಸರಿಯೊಂದಿಗೆ ಐಸ್ಕ್ರೀಂ ಸೇರಿಕೊಂಡು ಹದವಾದ ರುಚಿಯಿಂದ ತಣ್ಣನೆಯ ಅನುಭವ ನೀಡಲಿದೆ. ಒಂದು ಥಾಲಿಗೆ ₹650 ಬೆಲೆ ನಿಗದಿ ಮಾಡಲಾಗಿದೆ.
ರೆಸ್ಟೊರೆಂಟ್: ಕೇಸರಿಯಾ
ಸಮಯ: ಪ್ರತಿದಿನ ಬೆಳಿಗ್ಗೆ 11ರಿಂದ ಮಧ್ಯಾಹ್ನ 3, ಸಂಜೆ 6 ರಿಂದ ರಾತ್ರಿ 11
ರಂಗೀಲೊ ಮೇಳ: ಫೆಬ್ರುವರಿ 17ರವರೆಗೆ ಮಾತ್ರ
ವಿಶೇಷ : ರಾಜಸ್ಥಾನ ಶೈಲಿಯ ತಾಲಿ
ಒಬ್ಬರಿಗೆ: ₹650
ಸ್ಥಳ: ಕೇಸರಿಯಾ, ಗೇಟ್ ನಂ 55, ಗೋಯೆಂಕಾ ಚೇಂಬರ್ಸ್, 19ನೇ ಮುಖ್ಯ ರಸ್ತೆ, 15ನೇ ಕ್ರಾಸ್, ಎರಡನೇ ಹಂತ, ಜೆ.ಪಿ ನಗರ
ಟೇಬಲ್ ಕಾಯ್ದಿರಿಸಲು: 08026590800
ಬರಹ ಇಷ್ಟವಾಯಿತೆ?
2
1
1
0
0
0 comments
View All