‘ದೇಶದ ಚಿತ್ರಣ ಬದಲಿಸಿದ ನಾಯಕ ರಾಜೀವ್‌’

ಬುಧವಾರ, ಜೂನ್ 26, 2019
28 °C

‘ದೇಶದ ಚಿತ್ರಣ ಬದಲಿಸಿದ ನಾಯಕ ರಾಜೀವ್‌’

Published:
Updated:
Prajavani

ವಿಜಯಪುರ: ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಪುಣ್ಯಸ್ಮರಣೆ ನಡೆಯಿತು. ರಾಜೀವ್‌ ಗಾಂಧಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮುಖಂಡರು ನಮನ ಸಲ್ಲಿಸಿದರು.

ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ವೈಜನಾಥ ಕರ್ಪೂರ ಮಠ ಮಾತನಾಡಿ, ‘ರಾಜೀವ್‌ ಗಾಂಧಿ ಅವರು ದೂರ ಸಂಪರ್ಕ ಕ್ಷೇತ್ರ, ಪಂಚಾಯತ್‌ ರಾಜ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಮೂಲಕ ದೇಶದ ಚಿತ್ರಣವನ್ನೇ ಬದಲಿಸಿದರು. ಬಡವರು, ದೀನ ದಲಿತರು, ಹಿಂದುಳಿದವರು, ವಿಶೇಷವಾಗಿ ಅಧಿಕಾರ ವಿಕೇಂದ್ರೀಕರಣದಲ್ಲಿ ಮಹಿಳೆಯರಿಗೆ ಶೇ 50ರಷ್ಟು ಸ್ಥಾನವನ್ನು ಮೀಸಲಿಟ್ಟಿರುವುದು ಮಹತ್ತರ ಕಾರ್ಯ’ ಎಂದು ಶ್ಲಾಘಿಸಿದರು.

ಕೆಪಿಸಿಸಿ ಕಿಸಾನ್ ಘಟಕದ ಉಪಾಧ್ಯಕ್ಷ ಡಿ.ಎಚ್.ಕಲಾಲ ಮಾತನಾಡಿದರು. ಮುಖಂಡರಾದ ಅಜಿತ್‌ ಸಿಂಗ್‌ ಪರದೇಶಿ, ಜಮೀರ್‌ ಅಹ್ಮದ್ ಬಕ್ಷಿ, ಆರತಿ ಶಹಾಪುರ, ಇರ್ಫಾನ್‌ ಶೇಖ್‌, ಸಾಹೇಬಗೌಡ ಬಿರಾದಾರ, ಮಹ್ಮದ್‌ ಹನೀಫ್‌ ಮಕಾನದಾರ, ಶಬ್ಬೀರ್‌ ಜಾಗೀರದಾರ, ವಸಂತ ಹೊನಮೊಡೆ, ಚನ್ನಬಸಪ್ಪ ನಂದರಗಿ, ಶರಣಪ್ಪ ಯಕ್ಕುಂಡಿ, ದಾವಲಸಾಬ್‌ ಬಾಗವಾನ, ಸುನೀಲ ಪತ್ತಾರ ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !