‘ಸಮಸ್ಯೆ ನಿವಾರಣೆಗೆ ಸಹಾಯವಾಣಿ’: ವಸತಿ ಸಚಿವ ಖಾದರ್‌

7
ಸಮಸ್ಯೆಗಳನ್ನು ಆಲಿಸಿದ ವಸತಿ ಸಚಿವ ಖಾದರ್‌

‘ಸಮಸ್ಯೆ ನಿವಾರಣೆಗೆ ಸಹಾಯವಾಣಿ’: ವಸತಿ ಸಚಿವ ಖಾದರ್‌

Published:
Updated:

ಬೆಂಗಳೂರು: ‘ವಸತಿ ಇಲಾಖೆಯ ಸಮಸ್ಯೆಗಳು ಹಾಗೂ ದೋಷಗಳ ಕುರಿತು ಮಾಹಿತಿ ಪಡೆಯುವ, ದೂರು ದಾಖಲಿಸುವ ಉದ್ದೇಶದಿಂದ ಉಚಿತ ಕರೆ ಸಂಖ್ಯೆಯನ್ನು ಬಿಡುಗಡೆ ಮಾಡಲಾಗುವುದು’ ಎಂದು ವಸತಿ ಸಚಿವ ಯು.ಟಿ. ಖಾದರ್ ಹೇಳಿದರು.

ವಸತಿ ಯೋಜನೆಗಳ ಅನುಷ್ಠಾನದ ಕುರಿತು ತಾಲ್ಲೂಕು ಮಟ್ಟದ ಅಧ್ಯಕ್ಷರ ಸಭೆ ನಡೆಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಗ್ರಾಮೀಣ ಜನರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ನಾವು ವೇದಿಕೆ ಒದಗಿಸಿದ್ದೆವು. ಇದರಿಂದ ನಮಗೆ ಹಲವಾರು ಮೂಲಸಮಸ್ಯೆಗಳ ಪರಿಚಯ ಆಯಿತು. ಅಲ್ಲದೇ ಗ್ರಾಮಪಂಚಾಯಿತಿಗಳ ಮಟ್ಟದಲ್ಲಿ ಸಾಕಷ್ಟು ಕುಂದುಕೊರತೆಗಳು ಇವೆ. ಅವುಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕಿದೆ’ ಎಂದರು.

‘ಮನೆಗಳಿಗಾಗಿ ಇಂದಿರಾ ಆ್ಯಪ್‌ ಮೂಲಕ ಅರ್ಜಿ ಸಲ್ಲಿಸಬಹುದು. ಒಂದು ವಾರದಲ್ಲಿ ಹಂಚಿಕೆಯ ಆದೇಶ ತಲುಪಲಿದೆ. ಫಲಾನುಭವಿಗಳ ಪಟ್ಟಿಯಲ್ಲಿ ದೋಷ ಇರುವ ಆರೋಪ ಕೇಳಿಬಂದಿದೆ. ಅದನ್ನು ಸರಿಪಡಿಸಲು ಚಿಂತಿಸಲಾಗಿದೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !