ಭಾನುವಾರ, ನವೆಂಬರ್ 17, 2019
24 °C

ಶಾಹಿದ್‌, ಇಶಾನ್‌ ಮನೆಗೆ ಪುಟ್ಟ ತಮ್ಮ

Published:
Updated:
Prajavani

‘ಧಡಕ್‌’ ಚಿತ್ರದಿಂದ ಬಾಲಿವುಡ್‌ಗೆ ಕಾಲಿಟ್ಟ ಇಶಾನ್‌ ಖಟ್ಟರ್‌ ಮತ್ತು ನಟ ಶಾಹಿದ್‌ ಕಪೂರ್‌ ಸಹೋದರರು ಪುಟ್ಟ ತಮ್ಮ ಹುಟ್ಟಿದ ಖುಷಿಯಲ್ಲಿದ್ದಾರೆ. ಇಶಾನ್‌ ಅಪ್ಪ ರಾಜೇಶ್‌ ಖಟ್ಟರ್‌ ಎರಡನೇ ಹೆಂಡತಿ ವಂದನಾ ಸಜ್ಞಾನಿ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಶಾಹಿದ್‌ ಕಪೂರ್‌ ಮತ್ತು ಇಶಾನ್‌ ಖಟ್ಟರ್‌ ಅವರ ತಾಯಿ ಒಬ್ಬಳೆ. ಆದರೆ, ತಂದೆ ಮಾತ್ರ ಬೇರೆ, ಬೇರೆ. ನಟ ಪಂಕಜ್‌ ಕಪೂರ್‌ ಮತ್ತು ನೀಲಿಮಾ ಅಜೀಂ ಅವರ ಪುತ್ರ ಶಾಹಿದ್‌ ಕಪೂರ್‌.ವಿಚ್ಛೇದನದ ಬಳಿಕ ನೀಲಿಮಾ ಅವರು ರಾಜೇಶ್ ಖಟ್ಟರ್ ಅವರನ್ನು ಮದುವೆಯಾದರು. ಈ ದಂಪತಿ ಪುತ್ರ ಇಶಾನ್‌ ಖಟ್ಟರ್‌. ಡೈವೋರ್ಸ್‌ ಬಳಿಕ ಶಾಹಿದ್‌ ತಂದೆ ಪಂಕಜ್‌ ಕಪೂರ್‌ ಅವರು ನಟಿ ಸುಪ್ರಿಯಾ ಪಾಠಕ್‌ ಅವರನ್ನು ವರಿಸಿದ್ದಾರೆ.

ನೀಲಿಮಾ ಅಜೀಂ ಅವರಿಗೆ ವಿಚ್ಛೇದನ ನೀಡಿದ್ದ ರಾಜೇಶ್‌ ಖಟ್ಟರ್‌ ಕಿರುತೆರೆ ನಟಿ ವಂದನಾ ಅವರನ್ನು  ಮದುವೆಯಾಗಿದ್ದರು. ರಾಜೇಶ್‌ ಮತ್ತು ವಂದನಾ ದಂಪತಿಗೆ ಹುಟ್ಟಿದ ಮಗು ವರಸೆಯಲ್ಲಿ ನಟ ಶಾಹಿದ್ ಕಪೂರ್‌ ಮತ್ತು ಇಶಾನ್‌ ಖಟ್ಟರ್‌ಗೂ ಸಹೋದರನಾಗಬೇಕು.

ಪ್ರತಿಕ್ರಿಯಿಸಿ (+)