ಶುಕ್ರವಾರ, ನವೆಂಬರ್ 15, 2019
23 °C

ಪಾಕಿಸ್ತಾನ ವಿಭಜನೆ: ರಾಜನಾಥ್‌ ಹೇಳಿಕೆಗೆ ಖಂಡನೆ

Published:
Updated:

ಇಸ್ಲಾಮಾಬಾದ್‌: ’ಪಾಕಿಸ್ತಾನವು ತನ್ನ ನಿಲುವುಗಳನ್ನು ಬದಲಾಯಿಸಿಕೊಳ್ಳದಿದ್ದರೆ ಆ ದೇಶವು ವಿಭಜನೆಯಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ‘ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೀಡಿರುವ ಹೇಳಿಕೆಗೆ ಪಾಕಿಸ್ತಾನ ತಿರುಗೇಟು ನೀಡಿದೆ.

’ಹರಿಯಾಣದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಭಾರತದ ಹಿರಿಯ ಸಚಿವರು ನೀಡಿರುವ ಪ್ರಚೋದನಾತ್ಮಕ ಹೇಳಿಕೆ, ಬಿಜೆಪಿಯ ಮನಃಸ್ಥಿತಿಯನ್ನು ತೆರೆದಿಡುತ್ತಿದೆ. ಇದನ್ನು ನಾವು ಖಂಡಿಸುತ್ತೇವೆ’ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ತಿಳಿಸಿದೆ.

’ಸಾರ್ವಭೌಮ ದೇಶ ವಿಭಜನೆಯಾಗಲಿದೆ ಎಂದು ಬೆದರಿಕೆ ಹಾಕುತ್ತಿರುವ ಸಚಿವರ ಬೇಜವಾಬ್ದಾರಿ ಹೇಳಿಕೆಯನ್ನು ವಿಶ್ವ ಸಮುದಾಯದ ಗಮನಕ್ಕೆ ತರುತ್ತೇವೆ’ ಎಂದೂ ವಿದೇಶಾಂಗ ಕಚೇರಿಯ ಹೇಳಿಕೆ ತಿಳಿಸಿದೆ.

’ದುಷ್ಟ ಶಕ್ತಿಗಳಿಂದ ದೇಶವನ್ನು ರಕ್ಷಿಸಿಕೊಳ್ಳಲು ಪಾಕಿಸ್ತಾನದ ಭದ್ರತಾ ಪಡೆಗಳು ಹಾಗೂ ಜನರು ಸಿದ್ಧರಾಗಿದ್ದಾರೆ ಎಂಬುದನ್ನು ರಾಜನಾಥ್‌ ಅವರು ಮರೆಯಬಾರದು’ ಎಂದೂ ಹೇಳಿದೆ.

 ಭಯೋತ್ಪಾದನೆಯನ್ನು ನಿಗ್ರಹಿಸಲು ಭಾರತದ ಜೊತೆಗೆ ಕೈಜೋಡಿಸುವ ಪ್ರಸ್ತಾವವನ್ನೂ ಪಾಕಿಸ್ತಾನ ತಿರಸ್ಕರಿಸಿದೆ.

’ಪಾಕಿಸ್ತಾನವು ಕಾಶ್ಮೀರವನ್ನು ಮರೆತು, ಭಯೋತ್ಪಾದನೆಯ ವಿರುದ್ಧ ಪ‍್ರಾಮಾಣಿಕವಾದ ಹೋರಾಟ ನಡೆಸಲಿ’ ಎಂದೂ ರಾಜನಾಥ್‌ ಸಿಂಗ್‌ ಹೇಳಿದ್ದರು.

ಪ್ರತಿಕ್ರಿಯಿಸಿ (+)