ರಾಜು ಗಾನೋತ್ಸವ ಶುರು

7
ರಾಜು ಅನಂತಸ್ವಾಮಿ ಅವರ ಸ್ಮರಣಾರ್ಥ ಕಾರ್ಯಕ್ರಮ

ರಾಜು ಗಾನೋತ್ಸವ ಶುರು

Published:
Updated:
Prajavani

ಕನ್ನಡ ಸುಗಮ ಸಂಗೀತದ ಅದ್ಭುತ ಪ್ರತಿಭೆ ರಾಜು ಅನಂತಸ್ವಾಮಿ ಅವರ ಸ್ಮರಣಾರ್ಥ ‘ನಾಕುತಂತಿ ಸಂಗೀತ ಗುಚ್ಛ’ ಸಂಸ್ಥೆಯು ಜ. 11ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ‘ರಾಜು ಗಾನೋತ್ಸವ’ ಎನ್ನುವ ವಿಶೇಷ ಕಾರ್ಯಕ್ರಮ ಆಯೋಜಿಸಿದೆ.

ಜ. 17ಕ್ಕೆ ರಾಜು ಇಹಲೋಕ ತ್ಯಜಿಸಿ ಹತ್ತು ವರ್ಷಗಳಾಗಿವೆ. ರಾಜು ಸ್ಮರಣೆಯ ಅಂಗವಾಗಿ ನಾಕುತಂತಿ ‘ಅನಂತ ಸತ್ಯ’ ಎನ್ನುವ ಸರಣಿ ಕಾರ್ಯಕ್ರಮವನ್ನು ಒಂದು ವರ್ಷದಿಂದ ನಡೆಸಿಕೊಂಡು ಬಂದಿದೆ. ಈ ಕಾರ್ಯಕ್ರಮದ ಮುಕ್ತಾಯದ ಅಂಗವಾಗಿ ‘ರಾಜು ಗಾನೋತ್ಸವ’ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು ‘ನಾಕುತಂತಿ’ ಸಂಸ್ಥೆಯ ಸ್ಥಾಪಕರಾದ ಮಧು ಮನೋಹರನ್, ಕಾರ್ತಿಕ್ ಪಾಂಡವಪುರ.

ತಂದೆ ಮೈಸೂರು ಅನಂತಸ್ವಾಮಿ ನೆನಪಿಗಾಗಿ ರಾಜು ಅನಂತಸ್ವಾಮಿ ಅವರು ‘ಅನಂತಚಿತ್ರ’ ಎನ್ನುವ ಕಾರ್ಯಕ್ರಮ ನಡೆಸುತ್ತಿದ್ದರು. ಅದರಂತೆ ರಾಜು ಅವರ ನೆನಪಿಗಾಗಿ ‘ಅನಂತ ಸತ್ಯ’ ಕಾರ್ಯಕ್ರಮವನ್ನು ಒಂದು ವರ್ಷ ನಡೆಸಿದ್ದೇವೆ. ಸ. ಜಗನ್ನಾಥ್ ಅವರ ಮನೆಯ ಸಭಾಂಗಣದಲ್ಲಿ ಪ್ರತಿ ತಿಂಗಳು ಈ ಕಾರ್ಯಕ್ರಮ ನಡೆಯುತ್ತಿತ್ತು. ಪ್ರತಿ ಬಾರಿಯೂ ಒಬ್ಬೊಬ್ಬ ಗಾಯಕರನ್ನು ಕರೆದು ಸುಗಮ ಸಂಗೀತ ಮತ್ತು ಭಾವಗೀತೆಗಳನ್ನು ಹಾಡಿಸಲಾಗುತ್ತಿತ್ತು. 11ರಂದು ಈ ಸರಣಿ ಕಾರ್ಯಕ್ರಮದ ಮುಕ್ತಾಯ ನಡೆಯಲಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ವಿ. ನಾಗೇಂದ್ರ ಪ್ರಸಾದ್, ಡಾ.ಜಯಶ್ರೀ ಅರವಿಂದ್, ಎಸ್.ಬಾಲಿ, ಲಹರಿ ವೇಲು, ಬಿ.ಸುರೇಶ, ಸ. ಜಗನ್ನಾಥ್ ಭಾಗವಹಿಸಲಿದ್ದಾರೆ. ಮೀಟಿಂಗ್ ಮೈಂಡ್ ಇನ್ಫೋಸಿಸ್ಟಮ್ಸ್, ವಾಸು ದೀಕ್ಷಿತ್, ಸುನೀತಾ ಅನಂತಸ್ವಾಮಿ, ಸವಿತಾ ಅನಂತ್, ಅನಿತಾ ಅನಂತಸ್ವಾಮಿ, ಸವಿಗಾನ ಮಂಜು, ಲಕ್ಷ್ಮಣ್, ಮನೀಶ್ ನಂಜಿ ಪಟೇಲ್, ಶಿಲ್ಪ ಶ್ರೀನಿ, ಗಣೇಶ್ ಅವರ ಸಹಯೋಗವಿದೆ.

ಗಾಯಕರಾದ ರಾಜ್‌ಗುರು ಹೊಸಕೋಟೆ, ಸುಮಾ ಎಲ್.ಎನ್. ಶಾಸ್ತ್ರೀ, ವಾಣಿ ಹರಿಕೃಷ್ಣ, ಮಧು ಮನೋಹರನ್, ರಮ್ಯಾ ವಸಿಷ್ಠ, ಪ್ರವೀಣ್–ಪ್ರದೀಪ್, ಶ್ರೀರಕ್ಷಾ ಅರವಿಂದ್, ನಿತಿನ್ ರಾಜಾರಾಮ್ ಶಾಸ್ತ್ರೀ, ಸಿಂಚನ್ ದೀಕ್ಷಿತ್, ಸ್ಪರ್ಶ ಆರ್.ಕೆ., ಸವಿತಾ ಕೆ.ಪಿ., ಹರೀಶ್ ನರಸಿಂಹ, ಸವಿಗಾನ ಮಂಜು, ಅರುಣ್ ಅಯ್ಯರ್ ಅವರು ಮೈಸೂರು ಅನಂತಸ್ವಾಮಿ ಹಾಗೂ ರಾಜು ಅನಂತಸ್ವಾಮಿ  ಅವರ ಗೀತೆಗಳಿಗೆ ಧ್ವನಿಯಾಗಲಿದ್ದಾರೆ.

‘ನಿನ್ನ ನೆನಪು ಬಂದಾಗ’ ವಿಶೇಷ ರೀತಿಯ ಕಾರ್ಯಕ್ರಮವನ್ನೂ ಗಾನೋತ್ಸವದಲ್ಲಿ ಪ್ರಸ್ತುತ ಪಡಿಸಲಾಗುವುದು. ಗಣ್ಯರು ರಾಜು ಅನಂತಸ್ವಾಮಿ ಜತೆಗಿನ ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಬೆಳಕು, ಹಾಡುಗಳ ಸಮ್ಮಿಲನ ಇದಾಗಲಿದ್ದು, ವಿಶಿಷ್ಟ ಅನುಭೂತಿ ನೀಡಲಿದೆ ಎನ್ನುತ್ತಾರೆ ಮಧು ಮನೋಹರನ್.

ಎರಡು ದಶಕಗಳಿಂದ ಸುಗಮ ಸಂಗೀತ ರಂಗದಲ್ಲಿ ಕ್ರಿಯಾಶೀಲವಾಗಿರುವ  ‘ನಾಕುತಂತಿ ಸಂಗೀತ ಗುಚ್ಛ’ ಸಂಸ್ಥೆ ಸುಗಮ ಸಂಗೀತವಲ್ಲದೇ, ರಂಗಭೂಮಿ, ಟಿ.ವಿ., ಧಾರಾವಾಹಿ, ರೇಡಿಯೊ ಮತ್ತು ಕಿರುಚಿತ್ರ ಮೊದಲಾದ ಸೃಜನಶೀಲ ಮಾಧ್ಯಮಗಳಲ್ಲಿ ತೊಡಗಿಕೊಂಡಿದೆ.

ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ.

ಅತಿಥಿಗಳು: ಶಾಂತಾ ಅನಂತಸ್ವಾಮಿ, ಶ್ರೀನಿವಾಸ್ ಜಿ. ಕಪ್ಪಣ್ಣ, ಪ್ರವೀಣ್ ಡಿ.ರಾವ್, ಗುರುರಾಜ್ ಹೊಸಕೋಟೆ, ಡಾ.ಆರ್. ಪೂರ್ಣಿಮಾ, ಎಸ್.ನರಸಿಂಹ. ಆಯೋಜನೆ–ನಾಕುತಂತಿ ಸಂಗೀತ ಗುಚ್ಛ. ಸ್ಥಳ–ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ 4

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !