ಉಗ್ರರಿಂದ 13 ಯೋಧರ ಹತ್ಯೆ

7
ಮ್ಯಾನ್ಮಾರ್‌ನ ಸ್ವಾತಂತ್ರ್ಯ ದಿನಾಚರಣೆಯಂದೇ ದಾಳಿ

ಉಗ್ರರಿಂದ 13 ಯೋಧರ ಹತ್ಯೆ

Published:
Updated:

ಯಾಂಗೂನ್‌ : ಮ್ಯಾನ್ಮಾರ್‌ನ ಸ್ವಾತಂತ್ರ್ಯ ದಿನಾಚರಣೆಯಂದೇ ರಖಿನೆ ಉಗ್ರರು ಸಂಘರ್ಷ ಪೀಡಿತ ರಖಿನೆ ರಾಜ್ಯದಲ್ಲಿ ನಾಲ್ಕು ಪೊಲೀಸ್‌ ಚೌಕಿಗಳ ಮೇಲೆ ದಾಳಿ ನಡೆಸಿ, ಭದ್ರತಾಪಡೆಯ 13 ಯೋಧರನ್ನು ಹತ್ಯೆ ಮಾಡಿದ್ದಾರೆ ಎಂದು ಸೇನೆ ಮತ್ತು ಶಸಸ್ತ್ರ ಪಡೆಯ ವಕ್ತಾರರು ತಿಳಿಸಿದ್ದಾರೆ.

ಈ ರಾಜ್ಯದಲ್ಲಿ ಡಿಸೆಂಬರ್ ಆರಂಭದಿಂದಲೂ ಹಿಂಸಾ ಕೃತ್ಯಗಳು ನಡೆದಿದ್ದವು. ಈಗ ಮತ್ತೊಮ್ಮೆ ಅಂತಹುದೇ ಘಟನೆಗೆ ಸಾಕ್ಷಿಯಾಗಿದೆ.

ರಖಿನೆ ಬೌದ್ಧ ಜನಾಂಗೀಯ ಅಲ್ಪಸಂಖ್ಯಾತರು ಹೆಚ್ಚಿನ ಸ್ವಾಯತ್ತತೆ ಬಯಸುತ್ತಿದ್ದು, ಇದರಿಂದ ಅರಾಕನ್ ಸೇನೆ ಮತ್ತು ದೇಶದ ಸೇನಾ ಪಡೆಗಳ ನಡುವೆ ತೀವ್ರ ಹೋರಾಟ ನಡೆಯುತ್ತಲೇ ಇದೆ.

ಜನಾಂಗೀಯ ಸ್ವಾಯತ್ತತೆಗಾಗಿ ಹೋರಾಟ ನಡೆಸುತ್ತಿರುವ ಅನೇಕ ಸಶಸ್ತ್ರ ಗುಂಪುಗಳೊಂದಿಗೆ ಶಾಂತಿ ಮಾತುಕತೆಗಳನ್ನು ಪ್ರಾರಂಭಿಸಲು ಕಳೆದ ತಿಂಗಳು ಮ್ಯಾನ್ಮಾರ್‌ ಸೇನೆಯು, ರಾಷ್ಟ್ರದ ಉತ್ತರ ಮತ್ತು ಈಶಾನ್ಯದಲ್ಲಿ ನಾಲ್ಕು ತಿಂಗಳ ಕಾಲ ಕದನ ವಿರಾಮ ಘೋಷಿಸಿತು. ಆದರೆ, ಈ ಘೋಷಣೆ ರಖಿನೆ ರಾಜ್ಯವನ್ನು ಹೊರತುಪಡಿಸಿದೆ.

‘ನಾಲ್ಕು ಪೊಲೀಸ್‌ ಚೌಕಿಗಳ ಮೇಲೆ ನಡೆದ ಗುಂಪು ದಾಳಿಯಲ್ಲಿ ನಮ್ಮ ಶತ್ರುಗಳ 13 ಶವಗಳು ಬಿದ್ದಿವೆ’ ಎಂದು ಅರಾಕನ್ ಸೇನೆಯ ವಕ್ತಾರ ಖಿನೀ ತು ಖಾ ಅವರು ತಿಳಿಸಿದ್ದಾರೆ.

‘ನಮ್ಮ ಸೇನೆಯ ಗುಂಪು ಮ್ಯಾನ್ಮಾರ್ ಭದ್ರತಾ ಪಡೆಯ 12 ಯೋಧರನ್ನು ಬಂಧಿಸಿದೆ. ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಅವರ ವಿರುದ್ಧದ ಪ್ರಕ್ರಿಯೆ ನಡೆಸುತ್ತೇವೆ’ ಎಂದು ಅವರು ಹೇಳಿದ್ದಾರೆ.

ಭದ್ರತಾ ಪಡೆಯಿಂದ ಪ್ರತ್ಯುತ್ತರ

ಮ್ಯಾನ್ಮಾರ್‌ ಸೇನಾ ವಕ್ತಾರ ಜಾವ್ ಮಿನ್ ಟ್ಯುನ್, ‘ದಾಳಿಗೆ ಭದ್ರತಾ ಪಡೆಯು ಪ್ರತ್ಯುತ್ತರ ನೀಡುತ್ತಿದೆ. ಈ ಪ್ರದೇಶದಲ್ಲಿ ಭದ್ರತೆ ಖಾತ್ರಿಪಡಿಸಲು ಸೇನಾ ಕಾರ್ಯಾಚರಣೆ ಮುಂದುವರಿದಿದೆ’ ಎಂದು ತಿಳಿಸಿದ್ದಾರೆ.

ಆದರೆ, ಶಸ್ತ್ರಸಜ್ಜಿತ ಗುಂಪು ಎಷ್ಟು ಮಂದಿಯನ್ನು ಕೊಂದಿದೆ ಮತ್ತು ಎಷ್ಟು ಮಂದಿಯನ್ನು ವಶದಲ್ಲಿಟ್ಟುಕೊಂಡಿದೆ ಎಂಬುದನ್ನು ಖಚಿತಪಡಿಸಲು ಅವರು ನಿರಾಕರಿಸಿದರು.  ಈ ಪ್ರದೇಶದಲ್ಲಿ ಪೊಲೀಸ್‌ ಚೌಕಿಗಳು ಇರುವುದು ದೇಶದ ನಾಗರಿಕರನ್ನು ರಕ್ಷಿಸಲು ಸಲುವಾಗಿಯೇ ಹೊರತು, ಅವರ ಮೇಲೆ ಆಕ್ರಮಣ ಮಾಡಲು ಅಲ್ಲ ಎಂದು  ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 4

  Sad
 • 0

  Frustrated
 • 0

  Angry

Comments:

0 comments

Write the first review for this !