ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್‌ ಅಡ್ಡಿ: ಸಿ.ಟಿ.ರವಿ

ಶುಕ್ರವಾರ, ಏಪ್ರಿಲ್ 26, 2019
22 °C

ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್‌ ಅಡ್ಡಿ: ಸಿ.ಟಿ.ರವಿ

Published:
Updated:

ಬೆಂಗಳೂರು: ರಾಮಮಂದಿರ ನಿರ್ಮಾಣ ಮಾಡಬೇಕು ಎಂಬುದು ಬಿಜೆಪಿಯ ಸಂಕಲ್ಪ. ಮಂದಿರ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿರುವುದು ಕಾಂಗ್ರೆಸ್‌ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ದೂರಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಮನ ಬಗ್ಗೆ ಸಿದ್ದರಾಮಯ್ಯ ಏನೇನೋ ಮಾತನಾಡುತ್ತಿದ್ದಾರೆ. ರಾಮನ ಕುರಿತು ಅಸಹನೆ ಬಿಟ್ಟಿಲ್ಲ. ಅವರ ಮಿದುಳಿನ ಸಾಫ್ಟ್‌ವೇರ್‌ಗೆ ವೈರಸ್‌ ದಾಳಿಯಾಗಿದೆ’ ಎಂದು ವ್ಯಂಗ್ಯವಾಡಿದರು.

‘ಜನರಿಗೆ ಅನ್ಯಾಯ ಮಾಡಿದ್ದರಿಂದಲೇ ಕಾಂಗ್ರೆಸ್‌ ನ್ಯಾಯ್‌ ಯೋಜನೆ ‍ಪ್ರಕಟಿಸಿದೆ. ನೋಟು ರದ್ದತಿಯಿಂದ ಸಾಕಷ್ಟು ಹಾನಿಯಾಗಿದೆ ಎಂದು ಸುಳ್ಳು ಪ್ರಚಾರದಲ್ಲಿ ತೊಡಗಿದೆ. ನೋಟು ರದ್ದತಿಯಿಂದ ಹಣಕ್ಕೆ ವಾರಸುದಾರರು ಯಾರು ಎಂಬುದು ಗೊತ್ತಾಗಿದೆ’ ಎಂದರು.

‘ಕಾಂಗ್ರೆಸ್‌ ಸುಳ್ಳು ಭರವಸೆಗಳನ್ನು ನೀಡುತ್ತಾ ಜನರನ್ನು ಮರಳು ಮಾಡಿ ಮತ ಗಿಟ್ಟಿಸಿಕೊಳ್ಳುವ ಯತ್ನದಲ್ಲಿ ತೊಡಗಿದೆ. ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳ ಪೈಕಿ ಶೇ 90ರಷ್ಟನ್ನು ನಮ್ಮ ಪಕ್ಷ ಈಡೇರಿಸಿದೆ. ಕಾಂಗ್ರೆಸ್‌ಗೆ ಮತ ಮೊದಲು, ಬಿಜೆಪಿಗೆ ದೇಶ ಮೊದಲು. ಅವರದ್ದು ಭರವಸೆ ಮಾತ್ರ. ನಮ್ಮದ್ದು ಸಂಕಲ್ಪ’ ಎಂದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 5

  Angry

Comments:

0 comments

Write the first review for this !