ಅಧಿಕಾರ ವಹಿಸಿದ ದಿನವೇ ವರದಿ ಕೇಳಿದ್ದ ರಮೀಳಾ

7
ಬಿಬಿಎಂಪಿ: 7 ವರ್ಷಗಳಿಂದ ಮಂಡನೆ ಆಗದ ಆಡಳಿತ ಮತ್ತು ಲೆಕ್ಕಪರಿಶೋಧನಾ ವರದಿ

ಅಧಿಕಾರ ವಹಿಸಿದ ದಿನವೇ ವರದಿ ಕೇಳಿದ್ದ ರಮೀಳಾ

Published:
Updated:

ಬೆಂಗಳೂರು: ಆಡಳಿತ ಮತ್ತು ಲೆಕ್ಕ ಪರಿಶೋಧನಾ ವರದಿಗಳನ್ನು ಮಂಡಿಸಲು ಅಧಿಕಾರಿಗಳು ಕ್ರಮವಹಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ದಿವಂಗತ ರಮೀಳಾ ಉಮಾಶಂಕರ್‌ ಉಪಮೇಯರ್‌ ಆಗಿ ಬುಧವಾರ ಅಧಿಕಾರ ವಹಿಸಿಕೊಂಡಿದ್ದ ದಿನವೇ ಪಾಲಿಕೆ ಆಯುಕ್ತರಿಗೆ ಈ ಬಗ್ಗೆ ಪತ್ರ ಬರೆದಿದ್ದರು.

ಆಡಳಿತ ಮತ್ತು ಲೆಕ್ಕ ಪರಿಶೋಧನಾ ವರದಿಯನ್ನು ಪಾಲಿಕೆ ಸಭೆಗೆ ಮಂಡಿಸುವ ಅಧಿಕಾರ ಇರುವುದು ಉಪಮೇಯರ್‌ ಅವರಿಗೆ. 2011ರ ಬಳಿಕ ಪಾಲಿಕೆ ಸಭೆಯಲ್ಲಿ ಈ ವರದಿಗಳು ಮಂಡನೆ ಆಗಿಲ್ಲ.

ಹೇಮಲತಾ ಅವರು ಉಪಮೇಯರ್‌ ಆಗಿದ್ದಾಗ ಈ ವರದಿ ಮಂಡಿಸಲು ಮುಂದಾಗಿದ್ದರು. ವರದಿಯಲ್ಲಿ ಲೋಪಗಳಿದ್ದುದರಿಂದ ಅದನ್ನು ಹಿಂಪಡೆಯಲಾಗಿತ್ತು. ನಿಕಟಪೂರ್ವ ಉಪಮೇಯರ್‌ ಪದ್ಮಾವತಿ ನರಸಿಂಹಮೂರ್ತಿ ಅವರು ಕರಡು ವರದಿಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಹೇಳಿದ್ದರು. ಜುಲೈನಲ್ಲಿ ನಡೆದ ಸಭೆಯಲ್ಲಿ ಆಗಿನ ಮೇಯರ್‌ ಸಂಪತ್‌ರಾಜ್‌ ಅವರೂ ಈ ವರದಿಯನ್ನು ತ್ವರಿತವಾಗಿ ಮಂಡಿಸುವಂತೆ ಸೂಚಿಸಿದ್ದರು. ಆದರೂ ಅಧಿಕಾರಿಗಳು ಕ್ರಮ ವಹಿಸಿರಲಿಲ್ಲ.

ಅಧಿಕಾರಿಗಳ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ರಮೀಳಾ, ಈ ಬಗ್ಗೆ ವರದಿ ಕೇಳಿದ್ದರು. ಈ ವಿಷಯದ ಕುರಿತು ಚರ್ಚಿಸಲು ಮೇಯರ್‌ ನೇತೃತ್ವದಲ್ಲಿ ಸಭೆ ಕರೆಯುವಂತೆ ಆಯುಕ್ತರಿಗೆ ಬರೆದಿದ್ದ ಪತ್ರದಲ್ಲಿ ಸೂಚಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !