ಅತ್ಯಾಚಾರ ಎಸಗಿ ಕೊಲೆ; ದೂರು

7

ಅತ್ಯಾಚಾರ ಎಸಗಿ ಕೊಲೆ; ದೂರು

Published:
Updated:

ಕಲಕೇರಿ: ಕುರಿ ಮೇಯಿಸಲು ತೆರಳಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಕೊಲೆಗೈಯಲಾಗಿದೆ ಎಂಬ ದೂರು ಕಲಕೇರಿ ಪೊಲೀಸ್‌ ಠಾಣೆಯಲ್ಲಿ ಗುರುವಾರ ದಾಖಲಾಗಿದೆ.

ಬೆಕಿನಾಳ ಗ್ರಾಮದ ಪರಮಣ್ಣ ನಾವಿ, ಮಲ್ಲಪ್ಪ ಪರಮಣ್ಣ ನಾವಿ ಎಂಬ ಇಬ್ಬರ ವಿರುದ್ಧ ಮೃತ ಮಹಿಳೆಯ ಕುಟುಂಬ ವರ್ಗದವರು ದೂರನ್ನು ನೀಡಿದ್ದಾರೆ ಎಂದು ಸಿಂದಗಿ ಸಿಪಿಐ ಮಹಾಂತೇಶ ದ್ಯಾಮಣ್ಣವರ ತಿಳಿಸಿದರು.

‘ಇಲ್ಲಿಗೆ ಸಮೀಪದ ಬೆಕಿನಾಳ ಗ್ರಾಮದಲ್ಲಿ ಬುಧವಾರ ಕುರಿ ಕಾಯಲು ತೆರಳಿದ್ದ 48 ವರ್ಷದ ಮಹಿಳೆ ಮೇಲೆ, ಗ್ರಾಮದವರೇ ಆದ ಇಬ್ಬರು ಅತ್ಯಾಚಾರ ಎಸಗಿ ಕೊಲೆಗೈದಿದ್ದಾರೆ ಎಂದು ಮಹಿಳೆಯ ಕುಟುಂಬ ವರ್ಗದವರು ಕಲಕೇರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ’ ಎಂದು ಕಲಕೇರಿ ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !