9 ವರ್ಷದ ಬಾಲಕಿ ಮೇಲೆ ಅತ್ಯಾಚಾರ

7

9 ವರ್ಷದ ಬಾಲಕಿ ಮೇಲೆ ಅತ್ಯಾಚಾರ

Published:
Updated:

ಬೆಂಗಳೂರು: ಬೇಗೂರಿನಲ್ಲಿ ಬುಧವಾರ ರಾತ್ರಿ ಶಕ್ತಿವೇಲು ಎಂಬಾತ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ.

ತಮಿಳುನಾಡಿನ ಶಕ್ತಿವೇಲು, ಬಾರ್‌ಬೆಂಡಿಂಗ್ ಕೆಲಸ ಮಾಡಿಕೊಂಡು ಬೇಗೂರಿನಲ್ಲಿ ನೆಲೆಸಿದ್ದ. ಪಕ್ಕದ ರಸ್ತೆಯಲ್ಲೇ ಸಂತ್ರಸ್ತೆ ಪೋಷಕರೊಂದಿಗೆ ವಾಸವಿದ್ದಾಳೆ. ಬಾಲಕಿಯ ತಂದೆಗೆ ಸ್ನೇಹಿತನಾಗಿದ್ದ ಆರೋಪಿ, ಆಗಾಗ್ಗೆ ಅವರ ಮನೆಗೆ ಹೋಗಿ ಮಾತನಾಡಿಸಿಕೊಂಡು ಬರುತ್ತಿದ್ದ. ಅಂತೆಯೇ ಬುಧವಾರ ರಾತ್ರಿ ಕೂಡ ಮನೆ ಹತ್ತಿರ ಹೋಗಿದ್ದ. ಈ ವೇಳೆ ಆಟವಾಡುತ್ತಿದ್ದ ಬಾಲಕಿಯನ್ನು ಚಾಕೊಲೇಟ್ ಕೊಡಿಸುವ ನೆಪದಲ್ಲಿ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 1

    Frustrated
  • 5

    Angry

Comments:

0 comments

Write the first review for this !