ಮಹಿಳೆ ಮೇಲೆ ಅತ್ಯಾಚಾರ; ಹೋಟೆಲ್ ವ್ಯವಸ್ಥಾಪಕ ಸೆರೆ

7

ಮಹಿಳೆ ಮೇಲೆ ಅತ್ಯಾಚಾರ; ಹೋಟೆಲ್ ವ್ಯವಸ್ಥಾಪಕ ಸೆರೆ

Published:
Updated:

ಬೆಂಗಳೂರು: ರಿಚ್ಮಂಡ್ ವೃತ್ತ ಬಳಿಯ ಹೋಟೆಲ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದಿದ್ದು, ಆ ಸಂಬಂಧ  ಹೋಟೆಲ್‌ನ ವ್ಯವಸ್ಥಾಪಕ ಮನೀಶ್‌ಕುಮಾರ್ ಸಿಂಗ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಪಟ್ನಾ ಜಿಲ್ಲೆಯ ಮನೀಶ್‌, ನಾಲ್ಕು ದಿನಗಳ ಹಿಂದಷ್ಟೇ ನಗರಕ್ಕೆ ಬಂದು ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ್ದ. ಉತ್ತರ ಭಾರತದ 32 ವರ್ಷದ ಮಹಿಳೆ ನೀಡಿರುವ ದೂರಿನನ್ವಯ ಅತ್ಯಾಚಾರ ಹಾಗೂ ಜೀವ ಬೆದರಿಕೆ ಆರೋಪದಡಿ ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಕೆಲಸ ನಿಮಿತ್ತ ನಗರಕ್ಕೆ ಭಾನುವಾರ ಬೆಳಿಗ್ಗೆ ಬಂದಿದ್ದ ಮಹಿಳೆ, ಹೋಟೆಲ್‌ ಕೊಠಡಿಯಲ್ಲಿ ಉಳಿದುಕೊಂಡಿದ್ದರು. ಅವರು ಲಿಫ್ಟ್‌ನಲ್ಲಿ ಹೋಗುತ್ತಿದ್ದ ವೇಳೆಯಲ್ಲೇ ಆರೋಪಿಯ ಪರಿಚಯವಾಗಿತ್ತು. ಅಲ್ಲಿಯೇ ಅವರಿಬ್ಬರು ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಹಲವು ಬಾರಿ ಕರೆ ಮಾಡಿಯೂ ಮಾತನಾಡಿದ್ದರು’ ಎಂದು ಪೊಲೀಸರು ಹೇಳಿದರು.

‘ಭಾನುವಾರ ರಾತ್ರಿ 12.30 ಗಂಟೆ ಸುಮಾರಿಗೆ ತನ್ನ ಕೊಠಡಿಗೆ ಕರೆಸಿಕೊಂಡಿದ್ದ ಆರೋಪಿ, ಅತ್ಯಾಚಾರ ಎಸಗಿದ್ದಾನೆ. ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಸಹ ಹಾಕಿದ್ದಾನೆ’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದರು. ಅದರಂತೆ ಆರೋಪಿಯನ್ನು ಸೆರೆಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದರು. 

30 ಬಾರಿ ಕರೆ: ‘ಮೊಬೈಲ್ ನಂಬರ್ ಸಿಕ್ಕ ಬಳಿಕ ಆರೋಪಿ, ಮಹಿಳೆಗೆ ಒಂದೇ ಬಾರಿ ಕರೆ ಮಾಡಿದ್ದ.  ಆದರೆ, ಮಹಿಳೆ ಆತನಿಗೆ 30ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದಾರೆ. ಅದರ ಉದ್ದೇಶವೇನು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ’ ಎಂದು ಪೊಲೀಸರು ಹೇಳಿದರು.  

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !