ಭಾನುವಾರ, ಡಿಸೆಂಬರ್ 8, 2019
21 °C
ಅಮೆರಿಕದ ಮಾಜಿ ಅಧ್ಯಕ್ಷರಿಗೆ ಅಪರೂಪದ ಗೌರವ

ಬುಷ್ ಶವಪೆಟ್ಟಿಗೆ ತರಲಿರುವ ‘ಏರ್‌ಫೋರ್ಸ್ ಒನ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹ್ಯೂಸ್ಟನ್: ಅಮೆರಿಕ ಅಧ್ಯಕ್ಷರಿಗೆ ಮೀಸಲಾಗಿರುವ ‘ಏರ್‌ಫೋರ್ಸ್ ಒನ್’ ವಿಮಾನವು ಶುಕ್ರವಾರ ನಿಧನರಾದ ಅಮೆರಿಕದ ಮಾಜಿ ಅಧ್ಯಕ್ಷ ಎಚ್.ಡಬ್ಲ್ಯೂ. ಬುಷ್ ಅವರ ಶವಪಟ್ಟಿಗೆಯನ್ನು ವಾಷಿಂಗ್ಟನ್‌ಗೆ ಕೊಂಡೊಯ್ಯಲು ಇಲ್ಲಿಗೆ ಸೋಮವಾರ ಬಂದಿದೆ.

ಇದು ಬುಷ್ ಅವರಿಗೆ ನೀಡುತ್ತಿರುವ ಅಪರೂಪದ ಗೌರವ ಎಂದು ಪರಿಗಣಿಸಲಾಗಿದ್ದು, ಇದನ್ನು ‘ಸ್ಪೆಷಲ್ ಏರ್ ಮಿಷನ್ 41’ ಎಂದು ಕರೆಯಲಾಗಿದೆ. ವಿಮಾನದಲ್ಲಿ ಎಚ್. ಡಬ್ಲ್ಯೂ. ಬುಷ್ ಅವರ ಪುತ್ರ, ಅಮೆರಿಕದ 43ನೇ ಅಧ್ಯಕ್ಷ ಜಾರ್ಜ್ ಬುಷ್ ಹಾಗೂ ಇತರರು ವಾಷಿಂಗ್ಟನ್‌ಗೆ ಪ್ರಯಾಣಿಸಲಿದ್ದಾರೆ.

ಮೊದಲಿಗೆ ವಾಷಿಂಗ್ಟನ್‌ನಲ್ಲಿ ಬುಧವಾರ ಸರ್ಕಾರಿ ಗೌರವ ಸಲ್ಲಿಸಲಾಗುತ್ತದೆ. ಬಳಿಕ ಹ್ಯೂಸ್ಟನ್‌ನ ಸೇಂಟ್ ಮಾರ್ಟಿನ್‌ ಚರ್ಚ್‌ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಗುರುವಾರ ಟೆಕ್ಸಾಸ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಪತ್ನಿ ಬಾರ್ಬರಾ, ಮಗಳು ರೂಬಿನ್ ಪಕ್ಕದಲ್ಲಿ ಅವರು ಮಣ್ಣಾಗಲಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು