ಟ್ಟಿಟರ್‌ನಲ್ಲಿ ಪ್ರೀತಿ ಹರಿಸಿದ ರಶ್ಮಿಕಾ ಮಂದಣ್ಣ

ಸೋಮವಾರ, ಏಪ್ರಿಲ್ 22, 2019
29 °C

ಟ್ಟಿಟರ್‌ನಲ್ಲಿ ಪ್ರೀತಿ ಹರಿಸಿದ ರಶ್ಮಿಕಾ ಮಂದಣ್ಣ

Published:
Updated:

ನಟ ರಕ್ಷಿತ್‌ ಶೆಟ್ಟಿ ಅಭಿನಯದ ಕಿರಿಕ್‌ ಪಾರ್ಟಿ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿ, ಬಳಿಕ ಟಾಲಿವುಡ್‌ಗೆ ಹಾರಿ ‘ಲಕ್ಕಿ ಹಿರೋಯಿನ್‌’ ಎನಿಸಿಕೊಂಡ ಚೆಲುವೆ ರಶ್ಮಿಕಾ ಮಂದಣ್ಣ ಆಗಾಗ್ಗೆ ಸುದ್ದಿಯಾಗುತ್ತಿರುತ್ತಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರುವ ಈ ಬೆಡಗಿ ರಕ್ಷಿತ್‌ ಜೊತೆಗಿನ ಮದುವೆ ಸಂಬಂಧ ಮುರಿದು ಬಿದ್ದ ಬಳಿಕ ಟೀಕೆಗೆ ಗುರಿಯಾಗಿ ಸುದ್ದಿಯಾಗಿದ್ದರು. ತೆಲುಗಿನ ‘ಗೀತ ಗೋವಿಂದಂ’ನಲ್ಲಿ ವಿಜಯ್‌ ದೇವರಕೊಂಡ ಜೊತೆ ಅಧರ ಚುಂಬನ ದೃಶ್ಯದಲ್ಲಿ ಕಾಣಿಸಿಕೊಂಡು ಸದ್ದು ಮಾಡಿದ್ದರು.

ಆ ಬಳಿಕ ರಶ್ಮಿಕಾ ಕಾಲೆಳೆಯುವವರ ಸಂಖ್ಯೆ ಜಾಸ್ತಿಯಾಯಿತಾದರೂ ಅಭಿಮಾನಿಗಳ ಸಂಖ್ಯೆಯೇನೂ ಕಮ್ಮಿಯಾಗಲಿಲ್ಲ.

ಅಭಿಮಾನಿಗಳು ಟ್ವಿಟರ್‌ನಲ್ಲಿ ಬಿರುಸು ಮಾತುಗಳನ್ನು ವಿನಿಮಯ ಮಾಡಿಕೊಂಡಾಗಲೆಲ್ಲ ಮಿನುಗು ಮಿಂಚಾಗಿ ಬಂದು ಸಮಾಧಾನ ಪಡಿಸುತ್ತಿದ್ದ ಬೆಡಗಿ ಫ್ಯಾನ್‌ಗಳೊಂದಿಗೆ ನಿರಂತರ ಒಡನಾಟ ಇಟ್ಟುಕೊಂಡಿದ್ದಾರೆ.

ಟೀಕೆ ಟಿಪ್ಪಣಿಗಳನ್ನು ಲೆಕ್ಕಿಸದೆ, ಯಶಸ್ಸಿನ ಅಮಲೇರಿಸಿಕೊಳ್ಳದೆ ಸಾಧನೆಯತ್ತ ಗಮನಹರಿಸಿದ ಈ ಕಿರಿಕ್‌ ಸುಂದರಿ ಈಗ ಅಭಿಮಾನಿಗಳ ಎದೆಗೆ ಹಿತಾನುಭವ ನೀಡುವ ಟ್ವೀಟ್‌ ಮಾಡಿದ್ದಾಳೆ.

‘ಇದು ನಾನು ಪ್ರೀತಿಸುವ ಸಮಯ. ನಿಜವಾದ ಪ್ರೀತಿಯನ್ನು ಪರೀಕ್ಷಿಸುವುದು ಎಲ್ಲಿ? ಮತ್ತು ನಿಮ್ಮನ್ನು  ನಿಜವಾಗಿಯೂ ಪ್ರೀತಿಸುವವರು ಹಾಗೂ ನಿಮ್ಮ ಬಗ್ಗೆ ಕಾಳಜಿ ವಹಿಸುವವರು ಯಾರೆಂಬುದನ್ನು ತಿಳಿದುಕೊಳ್ಳುವ ಸಮಯವಿದು. ಈ ಜಗತ್ತಿನಲ್ಲಿ ಅವರು ನಿಜವಾಗಿಯೂ ನಿಮ್ಮ ಎಲ್ಲ ಪ್ರೀತಿ ಮತ್ತು ಆರೈಕೆಗೆ ಅರ್ಹರು. ಹಾಗೆಯೇ ಯಾರು ನಿಮ್ಮನ್ನು ಪ್ರೀತಿಸುವುದಿಲ್ಲವೋ ಇರಲಿ ಬಿಡಿ. ಅವರಿಗೂ ಒಳ್ಳೆಯದಾಗಲಿ ಎಂದು ಹರಸಿ ಬಿಡಿ’ ಎಂದು ಟ್ವೀಟಿಸಿದ್ದಾರೆ.

ಇದ್ದಕ್ಕಿಂದ್ದಂತೆ ರಶ್ಮಿಕಾ ‘ಪ್ರೀತಿ’ಹರಿಸಿದ್ದೇಕೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ ಇದರಿಂದ ಆಕೆಯ ಅಭಿಮಾನಿಗಳಿಗಂತೂ ಕಚಗುಳಿ ಇಟ್ಟಂತಾಗಿದೆ. ಮಂಗಳವಾರ ಪ್ರಕಟವಾಗಿರುವ ಈ ಟ್ವೀಟ್‌ಗೆ 5ಸಾವಿರಕ್ಕೂ ಹೆಚ್ಚು ಜನ ಲೈಕ್‌ ಒತ್ತಿದ್ದರೆ, 348ಮಂದಿ ಶೇರ್‌ ಮಾಡಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 9

  Happy
 • 5

  Amused
 • 1

  Sad
 • 4

  Frustrated
 • 19

  Angry

Comments:

0 comments

Write the first review for this !