‘ಪುನರ್ವಸತಿ ಕೇಂದ್ರ ನೋಡಿ ನಾಚಿಕೆಯಾಯ್ತು..!’

7
ಬಳೂತಿ ಜಾಕ್‌ವೆಲ್‌ನಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆ

‘ಪುನರ್ವಸತಿ ಕೇಂದ್ರ ನೋಡಿ ನಾಚಿಕೆಯಾಯ್ತು..!’

Published:
Updated:

ವಿಜಯಪುರ:  ‘ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಭೂಮಿ ಕಳೆದುಕೊಂಡ ಸಂತ್ರಸ್ಥರ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ ಪುನರ್ವಸತಿ ಕೇಂದ್ರದಲ್ಲಿನ ಅವ್ಯವಸ್ಥೆ ಕಂಡು ನನಗೆ ನಾಚಿಕೆಯಾಯಿತು’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

‘ಎಂಟತ್ತು ಪುನರ್ವಸತಿ ಕೇಂದ್ರಗಳನ್ನು ಸ್ವತಃ ನೋಡಿರುವೆ. ಅಲ್ಲಿನ ವ್ಯವಸ್ಥೆ ಎಳ್ಳಷ್ಟು ಸರಿಯಾಗಿಲ್ಲ. ನಾನೇ ಒಂದು ತಂಡ ರಚಿಸಿ, ಎರಡ್ಮೂರು ತಿಂಗಳಲ್ಲಿ ವರದಿ ತರಿಸಿಕೊಂಡು ಅಧ್ಯಯನ ನಡೆಸುವೆ. ನಂತರ ಅಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಭಾನುವಾರ ಬಸವನಬಾಗೇವಾಡಿ ತಾಲ್ಲೂಕಿನ ಬಳೂತಿ ಜಾಕ್‌ವೆಲ್‌ ವೀಕ್ಷಿಸಿದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

‘ರಾಜ್ಯದ ರೈತರ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತು ಕೊಟ್ಟಿದ್ದಾರೆ. ಹೀಗಾಗಿ ಆರ್ಥಿಕ ಸ್ಥಿತಿಗತಿಯನ್ನು ತಿಳಿದುಕೊಂಡು, ಜಲಸಂಪನ್ಮೂಲ ಇಲಾಖೆಗೆ ಬಜೆಟ್‌ ನಿಗದಿ ಮಾಡಲಾಗುತ್ತದೆ. ನೀರಾವರಿ ಯೋಜನೆಗಳ ಸಂತ್ರಸ್ಥರಿಗೆ ಏಕರೂಪ ಪರಿಹಾರ ನೀಡಬೇಕೆಂಬ ಬೇಡಿಕೆಯಿದ್ದು, ಆ ನಿಟ್ಟಿನಲ್ಲೂ ಸಹ ಯೋಚನೆ ಮಾಡಲಾಗುತ್ತಿದೆ’ ಎಂದರು.

‘ಯಾವ ಶಾಸಕರಲ್ಲಿಯೂ ಅತೃಪ್ತಿಯಿಲ್ಲ. ನನಗೂ ಕೂಡ ಹಿಂದಿನ ಸರ್ಕಾರದಲ್ಲಿ ಕೆಲ ತಿಂಗಳು ಅವಕಾಶ ಸಿಕ್ಕಿರಲಿಲ್ಲ. ನಾನೇನೂ ಆಗ ಅತೃಪ್ತನಾಗಿದ್ದೇನಾ ? ಇನ್ನೂ ಆರು ಸಚಿವ ಸ್ಥಾನದ ಕೋಟಾ ಕಾಂಗ್ರೆಸ್‌ ಪಾಲಿಗಿದೆ. ಅನುಭವಸ್ಥರಿಗೆ ಕೊಡುವ ಯೋಚನೆಯಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !