ಬುಧವಾರ, ನವೆಂಬರ್ 13, 2019
23 °C

ವಾಚಕರವಾಣಿ | ಬೋಗಿಗಳು ಅತ್ಯಾಧುನಿಕವಾಗಿದ್ದರೂ ಟಾಯ್ಲೆಟ್ಟುಗಳು ಮಾತ್ರ ನರಕಸದೃಶ

Published:
Updated:

ನಾನು ಮತ್ತು ನನ್ನ ಪತಿ ಬೀದರ್‌ಗೆ ಹೋಗಿದ್ದೆವು. ನಮ್ಮ ಟಿಕೆಟ್ ಇದ್ದದ್ದು ಯಶವಂತಪುರ- ಬೀದರ್ ನಡುವಿನ ಎರಡು ರೈಲುಗಳಿಗೆ.  ಎರಡೂ ರೈಲುಗಳ ಬೋಗಿಗಳು ಅತ್ಯಾಧುನಿಕವಾಗಿದ್ದವು. ಆದರೆ ಟಾಯ್ಲೆಟ್ಟುಗಳು ಮಾತ್ರ ನರಕಸದೃಶ.

ಮೊದಲೆಲ್ಲ ಸಾದಾ ಟಾಯ್ಲೆಟ್ಟುಗಳು ಇರುತ್ತಿದ್ದವು. ಈ ರೈಲುಗಳಲ್ಲಿ ವಿಮಾನದ ಟಾಯ್ಲೆಟ್ಟುಗಳ ಮಾದರಿಯಲ್ಲಿ ಭಯಂಕರ ಎಲೆಕ್ಟ್ರಾನಿಕ್ ವ್ಯವಸ್ಥೆ. ಆದರೂ ಯಾವುದೂ ಹೊರಗೆ ಹೋಗದೆ ಅಲ್ಲೇ ನಿಂತಿರುತ್ತಿತ್ತು. ಭಾರತೀಯ ಮಾದರಿಯ ಹತ್ತು ಕಮೋಡ್‌ಗಳು ಇದ್ದರೆ, ಒಂದು ಮಾತ್ರ ವೆಸ್ಟ್ರನ್ ಕಮೋಡ್.

ನಮ್ಮಂಥ ಹಿರಿಯ ನಾಗರಿಕರಿಗೆ ಎಷ್ಟೊಂದು ಹಿಂಸೆಯಾಯಿತು ಎಂದರೆ, ಬೀದರ್ ತಲುಪಿದ ದಿನವೇ ರಾತ್ರಿ ನನ್ನ ಪತಿ ಚಳಿ ಜ್ವರದಿಂದ ನರಳಿದರು. ಮೂರೂ ದಿನ ಜ್ವರವನ್ನು ಸಹಿಸಿಕೊಂಡು ಬೆಂಗಳೂರಿಗೆ ಮರಳಿದಾಗ, ರೈಲಿನ ಟಾಯ್ಲೆಟ್‌ ಬಳಸಿದ್ದಕ್ಕೆ ಮೂತ್ರದ ಸೋಂಕು ಆಗಿರುವುದು ತಿಳಿದುಬಂತು. ಅಷ್ಟು ದುಬಾರಿ ಶುಲ್ಕ ಕೊಟ್ಟು ಪ್ರಯಾಣಿಸುವವರು ‘ಸ್ವಚ್ಛ ಭಾರತ’ದಲ್ಲಿ ಇದನ್ನು ಅನುಭವಿಸಬೇಕೇ? ಇದನ್ನು ಸರಿಪಡಿಸುವವರು ಯಾರು?
–ಎಸ್.ನಾಗವೇಣಿ, ಬೆಂಗಳೂರು

ಪ್ರತಿಕ್ರಿಯಿಸಿ (+)