ಯು.ಬಿ ಕಂಪನಿ ಮೇಲ್ಮನವಿ : ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ

7

ಯು.ಬಿ ಕಂಪನಿ ಮೇಲ್ಮನವಿ : ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ

Published:
Updated:

ಬೆಂಗಳೂರು: ಬಹುಕೋಟಿ ಮೊತ್ತದ ಸಾಲ ಪಡೆದು ಬ್ಯಾಂಕುಗಳಿಗೆ ವಂಚನೆ ಎಸಗಿದ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ್ ಮಲ್ಯ ಒಡೆತನದ ಯುನೈಟೆಡ್ ಬ್ರಿವರೀಸ್ (ಯು.ಬಿ) ಕಂಪನಿ ಸಲ್ಲಿಸಿರುವ ಮೇಲ್ಮನವಿ ವಿಚಾರಣೆಯಿಂದ ನ್ಯಾಯಮೂರ್ತಿ ಆರ್.ದೇವದಾಸ್‌ ಹಿಂದೆ ಸರಿದಿದ್ದಾರೆ.

ಈ ಕಾರಣಕ್ಕೆ ಈ ಪ್ರಕರಣವನ್ನು ಮತ್ತೊಂದು ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಗೊಳಿಸುವಂತೆ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ಆದೇಶಿಸಿದೆ.

ಕಿಂಗ್‌ಫಿಷರ್ ಏರ್‌ಲೈನ್ಸ್ ಲಿಮಿಟೆಡ್ ಕಂಪನಿಯ ಸಾಲಕ್ಕೆ ಖಾತ್ರಿ ಒದಗಿಸಲಾಗಿದ್ದ ಯುಬಿಎಚ್‌ಎಲ್ ಕಂಪನಿಯ ಷೇರುಗಳನ್ನು ಮಾರಾಟ ಮಾಡಿ ಅದನ್ನು ಮುಚ್ಚುವಂತೆ 2017ರ ಫೆ.7ರಂದು ಕಂಪನಿ ನ್ಯಾಯಾಲಯ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ.

ಪ್ರಕರಣ ಇದೇ 18ರಂದು ಮತ್ತೊಂದು ನ್ಯಾಯಪೀಠದ ಮುಂದೆ ವಿಚಾರಣೆಗೆ ಬರಲಿದೆ.
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !