13 ಸಾವಿರ ಕೆ.ಜಿ ರಕ್ತಚಂದನ ಸಾಗಣೆ

7

13 ಸಾವಿರ ಕೆ.ಜಿ ರಕ್ತಚಂದನ ಸಾಗಣೆ

Published:
Updated:

ಬೆಂಗಳೂರು: ಕಬ್ಬನ್‌ಪಾರ್ಕ್‌ ಪೊಲೀಸರು ಆರೋಪಿಗಳಿಂದ ಜಪ್ತಿ ಮಾಡಿದ್ದ ಮೂರು ಡೈರಿಗಳನ್ನು ಪರಿಶೀಲಿಸಿದಾಗ ಈ ಮಾಹಿತಿ ಸಿಕ್ಕಿದೆ. ಇವರಿಂದ ರಕ್ತಚಂದನ ಖರೀದಿಸಿದ್ದ ಕಾರ್ಖಾನೆಗಳ ಮಾಲೀಕರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.

ತಂದೆ–ಮಗನ ಬಂಧನದ ವಿಷಯ ತಿಳಿದು ಆಂಧ್ರಪ್ರದೇಶದ ಅರಣ್ಯಾಧಿಕಾರಿಗಳೂ ಸೋಮವಾರ ನಗರಕ್ಕೆ ಬಂದು ಆರೋಪಿಗಳನ್ನು ವಿಚಾರಣೆ ನಡೆಸಿ ಹೋಗಿದ್ದಾರೆ. ಅಲ್ಲದೆ, ನಗರ ವ್ಯಾಪ್ತಿಯಲ್ಲಿ ಹಳೇ ಮರಗಳನ್ನು ಕಡಿಯಲು ಬಿಬಿಎಂಪಿಯಿಂದ ಗುತ್ತಿಗೆ ಪಡೆದಿದ್ದ ಸಂಪಂಗಿ ಅವರನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ.

‘ಆಂಧ್ರದ ಅರಣ್ಯ ಪ್ರದೇಶಗಳಿಂದ ಕಳವಾಗುವ ಗಂಧದ ಮರಗಳು ಕಟ್ಟಿಗೇಹಳ್ಳಿಗೆ ಸಾಗಣೆ ಆಗುತ್ತಿವೆ ಎಂಬ ಮಾಹಿತಿ ಮೊದಲಿನಿಂದಲೂ ಇತ್ತು. ಆದರೆ, ದಂಧೆಕೋರರು ಯಾರೆಂಬುದು ಸ್ಪಷ್ಟವಾಗಿ ಆ ರಾಜ್ಯದ ಅಧಿಕಾರಿಗಳಿಗೆ ಗೊತ್ತಿರಲಿಲ್ಲ. ಈಗ ತಂದೆ–ಮಗ
ಸಿಕ್ಕಿಬಿದ್ದಿರುವುದರಿಂದ ಅಲ್ಲಿನ ಪೊಲೀಸರೂ ಹಳೇ ಪ್ರಕರಣಗಳ ತನಿಖೆ ಚುರುಕುಗೊಳಿಸಿದ್ದಾರೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಶಾರ್ಟ್ ಸರ್ಕಿಟ್: ಮೇಕೆಗಳ ಸಾವು

ಬೆಂಗಳೂರು: ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡು 10ಕ್ಕೂ ಹೆಚ್ಚು ಮೇಕೆಗಳು ಮೃತಪಟ್ಟಿರುವ ಘಟನೆ ಸುಬ್ರಹ್ಮಣ್ಯಪುರ ಬಳಿಯ ವಸಂತಪುರದಲ್ಲಿ ನಡೆದಿದೆ.

‘ವಸಂತವಲ್ಲಭ ದೇವಸ್ಥಾನ ಸಮೀಪದಲ್ಲಿ ಸ್ಥಳೀಯ ನಿವಾಸಿ ಜಯರಾಂ ಎಂಬುವರು ಕಾಂಡಿಮೆಂಟ್ಸ್ ಅಂಗಡಿ ನಡೆಸುತ್ತಿದ್ದಾರೆ. ಅದರ ಪಕ್ಕವೇ ಶೆಡ್‌ ನಿರ್ಮಿಸಿ ಮೇಕೆಗಳನ್ನು ಸಾಕುತ್ತಿದ್ದರು’ ಎಂದು ಸುಬ್ರಹ್ಮಣ್ಯಪುರ ಪೊಲೀಸರು ಹೇಳಿದರು.

‘ತಂಪು ಪಾನೀಯಗಳ ಮಾರಾಟಕ್ಕಾಗಿ ಅಂಗಡಿಯಲ್ಲಿ ರೆಫ್ರಿಜರೇಟರ್‌ ಇಟ್ಟುಕೊಂಡಿದ್ದಾರೆ. ಅದರಲ್ಲೇ ಸೋಮವಾರ ರಾತ್ರಿ ಶಾರ್ಟ್‌ ಸರ್ಕಿಟ್ ಉಂಟಾಗಿ ಅಂಗಡಿಯಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಅದರ ಹೊಗೆ ಶೆಡ್‌ನೊಳಗೆ ಆವರಿಸಿದ್ದರಿಂದ ಮೇಕೆಗಳು ಉಸಿರುಗಟ್ಟಿ ಸತ್ತಿವೆ’ ಎಂದು ತಿಳಿಸಿದರು.

‘ಗಸ್ತಿನಲ್ಲಿದ್ದ ಸಿಬ್ಬಂದಿ, ಬೆಂಕಿ ಕಂಡು ಅಗ್ನಿಶಾಮಕ ದಳಕ್ಕೆ ತಿಳಿಸಿದ್ದರು. ಬೆಂಕಿ ನಂದಿಸುವಷ್ಟರಲ್ಲಿ ಮೇಕೆಗಳು ಸತ್ತು ಬಿದ್ದಿದ್ದವು’ ಎಂದು ಪೊಲೀಸರು ಹೇಳಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !