ಎಚ್‌ಡಿಕೆ ಪೆಟ್ರೋಲ್‌–ಡೀಸೆಲ್‌ ದರ ಇಳಿಸಲಿ: ಎನ್‌.ರವಿಕುಮಾರ್‌ ಆಗ್ರಹ

7

ಎಚ್‌ಡಿಕೆ ಪೆಟ್ರೋಲ್‌–ಡೀಸೆಲ್‌ ದರ ಇಳಿಸಲಿ: ಎನ್‌.ರವಿಕುಮಾರ್‌ ಆಗ್ರಹ

Published:
Updated:

ವಿಜಯಪುರ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಇಂಧನ ಧಾರಣೆ ಇಳಿಸಲು ಮುಂದಾಗಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಎನ್‌.ರವಿಕುಮಾರ್‌ ಆಗ್ರಹಿಸಿದರು.

‘ಒಂದು ಲೀಟರ್‌ ಪೆಟ್ರೋಲ್‌ಗೆ ರಾಜ್ಯ ಸರ್ಕಾರ ₹ 21.50 ತೆರಿಗೆ ಪಡೆಯುತ್ತಿದೆ. ಕೇಂದ್ರ ಸಂಗ್ರಹಿಸುವ ತೆರಿಗೆ ಮೊತ್ತದಲ್ಲೂ ಶೇ 42ರಷ್ಟು ಪಾಲನ್ನು ರಾಜ್ಯಕ್ಕೆ ನೀಡುತ್ತದೆ. ಈ ಎರಡೂ ಸೇರಿ ಕನಿಷ್ಠ ₹ 25ರಿಂದ ₹ 26 ರಾಜ್ಯದ ಬೊಕ್ಕಸ ಸೇರುತ್ತಿದೆ. ಇದರಲ್ಲಿ ₹ 5ರಷ್ಟನ್ನು ಮುಖ್ಯಮಂತ್ರಿ ಇಳಿಸಬೇಕು’ ಎಂದು ಬುಧವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಅಂತರರಾಷ್ಟ್ರೀಯ ಮಟ್ಟದಲ್ಲಿ ಡಾಲರ್‌ ಬೆಲೆ ಏರಿಳಿಕೆಯಿಂದ ಇಂಧನ ಧಾರಣೆ ತುಟ್ಟಿಯಾಗಿದೆ. ಕೆಲವೇ ದಿನಗಳಲ್ಲಿ ಇದು ನಿಯಂತ್ರಣಕ್ಕೆ ಬರಲಿದೆ. ಬಿಜೆಪಿ, ಮೋದಿ ಇಂಧನ ಧಾರಣೆ ಹೆಚ್ಚಿಸುತ್ತಿಲ್ಲ’ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

‘ಕೇಸರಿ ಪತ್ರ ಹೊರಡಿಸುವುದಾಗಿ ಎಚ್‌ಡಿಕೆ ಮಾಡಿರುವ ವ್ಯಂಗ್ಯ ಟೀಕೆ ಪ್ರಜಾಪ್ರಭುತ್ವಕ್ಕೆ ಶೋಭೆ ತರುವಂತದಲ್ಲ. ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ 50ಕ್ಕೂ ಹೆಚ್ಚು ದೇಗುಲಗಳಿಗೆ ಭೇಟಿ ನೀಡಿರುವ ಮುಖ್ಯಮಂತ್ರಿಗೆ ಉತ್ತರ ಕರ್ನಾಟಕದ ಬರಪೀಡಿತ ಜಿಲ್ಲೆಗಳಿಗೆ ಭೇಟಿ ಕೊಡಲು ಸಮಯ ಸಿಕ್ತಿಲ್ಲ’ ಎಂದು ರವಿಕುಮಾರ್‌ ಲೇವಡಿ ಮಾಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !