ಮುಂದುವರಿದ ನಿರ್ಗತಿಕರ ಸಮೀಕ್ಷೆ: 1,527 ಮಂದಿ ಪತ್ತೆ

7

ಮುಂದುವರಿದ ನಿರ್ಗತಿಕರ ಸಮೀಕ್ಷೆ: 1,527 ಮಂದಿ ಪತ್ತೆ

Published:
Updated:

ಬೆಂಗಳೂರು: ಬಿಬಿಎಂಪಿಯು ಪಶ್ಚಿಮ ವಲಯದಲ್ಲಿ ನಿರ್ಗತಿಕರ ಸಮೀಕ್ಷೆ ಮುಗಿಸಿ ಮಂಗಳವಾರದಿಂದ ಮತ್ತೆ ಮೂರು ದಿನ ದಕ್ಷಿಣ ವಲಯದಲ್ಲಿ ಸಮೀಕ್ಷೆ ಆರಂಭಿಸಿತು.

ನಾನಾ ತೊಂದರೆಗಳಿಂದ ಮನೆ ತೊರೆದು ನಗರಕ್ಕೆ ಬಂದು ಸುರಂಗ ಮಾರ್ಗ, ಬಸ್‌ ನಿಲ್ದಾಣ ಹಾಗೂ ಪಾದಚಾರಿ ಮಾರ್ಗಗಳನ್ನೇ ನಿವಾಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ನಿರ್ಗತಿಕರಿಗೆ ಸೂರು ಕಲ್ಪಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಸಮೀಕ್ಷೆಗೆ ಬಿಬಿಎಂಪಿಯೊಂದಿಗೆ ಕೈ ಜೋಡಿಸಿರುವ ಸ್ವಯಂ ಸೇವಾ ಸಂಸ್ಥೆಗಳು 5 ತಂಡಗಳಂತೆ ರಾತ್ರಿ 9.30 ಗಂಟೆಯಿಂದ ಮುಂಜಾನೆವರೆಗೂ ಪುರಭವನ, ಲಾಲ್‌ಬಾಗ್‌ ಮತ್ತು ಊರ್ವಶಿ ಚಿತ್ರಮಂದಿರ ಸುತ್ತಮುತ್ತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿದವು.

ಈಗಾಗಲೇ ಪಶ್ಚಿಮ ವಲಯದಲ್ಲಿ ಸಮೀಕ್ಷೆ ನಡೆಸಿದ ಸಂಸ್ಥೆಗಳು 1,527 ನಿರ್ಗತಿಕರನ್ನು ಪತ್ತೆ ಹಚ್ಚಿದ್ದು, ಪಾದಚಾರಿ ಮಾರ್ಗದಲ್ಲಿ ಮಲಗಿದ್ದ ನಿರಾಶ್ರಿತರಿಂದ ಮಾಹಿತಿ ಪಡೆದು ಅವರಿಗೆ ನಾವಿದ್ದೇವೆ ಎಂಬ ಅಭಯ ತುಂಬಿವೆ.

‘ಈಗಾಗಲೇ ಪತ್ತೆ ಹಚ್ಚಿದ ನಿರಾಶ್ರಿತರ ಪಟ್ಟಿಯನ್ನು ಆಯುಕ್ತರಿಗೆ ಸಲ್ಲಿಸಿದ್ದೇವೆ’ ಎಂದು ಸುರಭಿ ಫೌಂಡೇಷನ್‌ ಟ್ರಸ್ಟ್‌ನ ಸದಸ್ಯ ಶರಣಪ್ಪ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !