ಸಂತ್ರಸ್ತರ ದೇಣಿಗೆ ಡಬ್ಬಿಯೇ ಕಣ್ಮರೆ!

7

ಸಂತ್ರಸ್ತರ ದೇಣಿಗೆ ಡಬ್ಬಿಯೇ ಕಣ್ಮರೆ!

Published:
Updated:

ದಾವಣಗೆರೆ: ನಾಡಿನ ನೆಲ, ಜಲ, ಗಡಿಗಳ ಪ್ರಶ್ನೆಗೆ ಬಂದಾಗ ಸಿನಿಮಾ ರಂಗದ ಸ್ಪಂದನೆ ಅಷ್ಟಕ್ಕಷ್ಟೆ. ಬೆಂಗಳೂರಿನಲ್ಲಿ ಈಚೆಗೆ ನಡೆದ ‘ದಿ ವಿಲನ್‌’ ಚಿತ್ರದ ಆಡಿಯೊ ಬಿಡುಗಡೆ ಕಾರ್ಯಕ್ರಮ ಸಿನಿಮಾದವರ ಅಸಡ್ಡೆಗೆ ಇನ್ನೊಂದು ಸಾಕ್ಷಿ ಒದಗಿಸಿತು.

ಜೀ ಟಿ.ವಿ. ಕನ್ನಡ ಆಯೋಜಿಸಿದ್ದ ಸಮಾರಂಭದಲ್ಲಿ ನಟರಾದ ಅಂಬರೀಷ್, ಶಿವರಾಜ್‌ಕುಮಾರ್, ಸುದೀಪ್‌, ಪ್ರೇಮ್ ಮತ್ತಿತರರು ಪಾಲ್ಗೊಂಡಿದ್ದರು. ಉದ್ಯಮದ ಹಿರಿಯರು, ಈ ನಟರುಗಳ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಶಿವರಾಜ್‌ಕುಮಾರ್ ಬಿಟ್ಟರೆ ಮತ್ತೆ ಯಾರೂ ಕೊಡಗಿನ ಸಂತ್ರಸ್ತರನ್ನು ನೆನಪು ಮಾಡಿಕೊಳ್ಳುವ ಗೋಜಿಗೆ ಹೋಗಲಿಲ್ಲ.

ಸಮಾರಂಭದಲ್ಲಿ ಮಾತ್ರ ಕೊಡಗಿನ ಸಂತ್ರಸ್ತರ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಲಾಯಿತು. ರಟ್ಟಿನ ಬಾಕ್ಸ್‌ ಹಿಡಿದು ಜನರ ಬಳಿಗೆ ಹೋಗಿ ಹಣ ಕೇಳಲಾಯಿತು. ಅಭಿಮಾನಿಗಳು ಕೈಲಾದಷ್ಟು ದೇಣಿಗೆ ನೀಡಿದರು. ಕೊನೆಗೆ ಆಡಿಯೊ ಬಿಡುಗಡೆಯಾಯಿತು. ಸ್ಟಾರ್‌ ನಟರು ಹೊರಟರು. ಅಭಿಮಾನಿಗಳೂ ಅವರನ್ನು ಹಿಂಬಾಲಿಸಿದರು. ಇದೇ ವೇಳೆ, ದೇಣಿಗೆ ಸಂಗ್ರಹಿಸಿದ ಬಾಕ್ಸ್‌ ಕಣ್ಮರೆಯಾಗಿದೆ. ಸಿಕ್ಕವರು ವೇದಿಕೆಗೆ ತಂದುಕೊಡಿ ಎಂಬ ಮಾಹಿತಿಯನ್ನು ಧ್ವನಿವರ್ಧಕ ಬಿತ್ತರಿಸ ತೊಡಗಿತು.

ಪ್ರಕಾಶ ಕುಗ್ವೆ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 3

  Sad
 • 0

  Frustrated
 • 1

  Angry

Comments:

0 comments

Write the first review for this !