‘ಜನ ಸಂಪರ್ಕ ಸಭೆ ಕರೆಯಲು ಮನವಿ’

7

‘ಜನ ಸಂಪರ್ಕ ಸಭೆ ಕರೆಯಲು ಮನವಿ’

Published:
Updated:
ಸವದತ್ತಿಯ ಹಳೆ ಬಸ್‌ ನಿಲ್ದಾಣ ಹತ್ತಿರದ ರಸ್ತೆಯ ಮೇಲೆ ಗುರುವಾರ ಗಟಾರ ತುಂಬಿ ರಸ್ತೆಯ ಮೇಲೆ ಕೊಳಚೆ ನೀರು ಹರಿದಾಡಿತು

ಸವದತ್ತಿ: ಇಲ್ಲಿನ ಹಳೆ ಬಸ್‌ ನಿಲ್ದಾಣದ ಕಲ್ಮಠದ ಹತ್ತಿರ ಗುರುವಾರ ಗಟಾರಗಳು ತುಂಬಿ ಕೊಳಚೆ ನೀರು ರಸ್ತೆಯ ಮೇಲೆ ಹರಿದ ಪರಿಣಾಮ ಸಾರ್ವಜನಿಕರು ಹಾಗೂ ವಾಹನ ಸವಾರರು ರಸ್ತೆ ದಾಟಲಿ ಪರದಾಡುವಂತಾಯಿತು.

ಪುರಸಭೆಯ ಸಿಬ್ಬಂದಿಗಳ ಬೇಜವಾಬ್ದಾರಿಯಿಂದ ಕೊಳಚ ನೀರು ರಸ್ತೆಯ ಮೇಲೆ ಹರಿಯುತ್ತಿದ ಎಂದು ಪಾದಾಚಾರಿಗಳು ಹಿಡಿ ಶಾಪ ಹಾಕಿದರು. ನಂತರ ಆಗಮಿಸಿದ ಮುಖ್ಯಾಧಿಕಾರಿ ಕೆ.ಐ. ನಾಗನೂರ ಸ್ವಚ್ಛ ಮಾಡಲು ಸಿಬ್ಬಂದಿಗೆ ಆದೇಶಿಸಿದರು.

‘ಜನ ಜಾಗೃತೆಗೊಳಿಸುವುದರ ಜತೆಗೆ ಪುರಸಭೆ ಗಮನಕ್ಕೆ ತಂದು, ಕೆಲಸ ಮಾಡಿಸಿಕೊಳ್ಳಲು ಸಾರ್ವಜನಿಕರು ಸಹಕರಿಸಬೇಕು’ ಎಂದು ನ್ಯೂ ಸ್ಟಾರ್ ಗ್ರೂಪ್‌ನ ಅಧ್ಯಕ್ಷ ಶಂಕರ ಇಜಂತಕರ ಅವರು ಮನವಿ ಮಾಡಿದರು.

‘ಶನಿವಾರ ಈ ಕುರಿತು ಜನ ಸಂಪರ್ಕ ಸಭೆ ಕರೆಯುವಂತೆ ಪುರಸಭೆಗೆ ಮನವಿ ಮಾಡಿಕೊಂಡರೂ, ಗಮನ ಹರಿಸದೆ ಇಲ್ಲದ ಕಾರಣ ಹೇಳುತ್ತಿದ್ದಾರೆ. ಸೋಮವಾರ ಬೆಳಿಗ್ಗೆಯಾದರು ಪುರಸಭೆ ಎದುರು ಸಾರ್ವಜನಿಕರ ಸಭೆ ನಡೆಸುವ ಮೂಲಕ ಪ್ರತಿ ವಾರ್ಡಿನ ಸಮಸ್ಯೆಗಳ ಮೇಲೆ ಬೆಳಕು ಚಲ್ಲಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರಿ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !