‘ಡೀಸೆಲ್‌ ಸಬ್ಸಿಡಿಗಾಗಿ ಮನವಿ’

7

‘ಡೀಸೆಲ್‌ ಸಬ್ಸಿಡಿಗಾಗಿ ಮನವಿ’

Published:
Updated:

ಬೆಂಗಳೂರು: ಸಾರಿಗೆ ನಿಗಮಗಳು ಬಳಸುವ ಡೀಸೆಲ್‌ಗೆ ಸರ್ಕಾರ ಸಬ್ಸಿಡಿ ಕೊಡಬೇಕು. ಈ ಬಗ್ಗೆ ಮನವಿ ಮಾಡುವುದಾಗಿ ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಅಧ್ಯಕ್ಷ ಎನ್‌.ಎ. ಹ್ಯಾರಿಸ್‌ ಹೇಳಿದರು. 

ನಿಗಮದ ಕೇಂದ್ರ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಅವರು, ‘ನಿಗಮ ನಷ್ಟದಲ್ಲಿದೆ. ಹಾಗೆಂದು ಅದಕ್ಕೆ ಟಿಕೆಟ್‌ ದರ ಏರಿಸಿದರೆ ಪ್ರಯೋಜನವಾಗದು. ದರ ಏರಿಕೆ ಸಂಬಂಧ ಈಗಾಗಲೇ ಅಧಿಕಾರಿಗಳು ಪ್ರಸ್ತಾವ ಸಲ್ಲಿಸಿದ್ದರೆ ನನಗೆ ಗೊತ್ತಿಲ್ಲ. ಆ ಬಗ್ಗೆ ಸರ್ಕಾರವೇ ನಿರ್ಧಾರ ಕೈಗೊಳ್ಳಲಿದೆ’ ಎಂದು ಹೇಳಿದರು. 

‘ವಿದ್ಯುತ್‌ ಬಸ್‌ಗಳನ್ನು ಖರೀದಿಸುವುದು ಅಥವಾ ಗುತ್ತಿಗೆಗೆ ಪಡೆಯುವ ಬಗ್ಗೆ ಒಂದೆರಡು ತಿಂಗಳಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ. ಎಲ್ಲವನ್ನೂ ದೀಢೀರ್‌ ಆಗಿ ನಿರ್ಧರಿಸಲು ಆಗುವುದಿಲ್ಲ’ ಎಂದರು.

‘ಬಿಎಂಟಿಸಿಯ ಮೊಬೈಲ್‌ ಆ್ಯಪ್‌ನ್ನು ಇನ್ನಷ್ಟು ಸುಧಾರಿಸಿ ಜನಬಳಕೆಗೆ ಅನುಕೂಲವಾಗುವಂತೆ ಮಾಡಲಾಗುವುದು. ಪ್ರಯಾಣಿಕರಿಗೆ ಸ್ಮಾರ್ಟ್‌ ಕಾರ್ಡ್‌ ಕೊಡುವ ಬಗ್ಗೆ ಆ್ಯಕ್ಸಿಸ್‌ ಬ್ಯಾಂಕ್‌ ಜತೆ ಮಾತುಕತೆ ನಡೆದಿದೆ. ಶೀಘ್ರ ಅನುಷ್ಠಾನಕ್ಕೆ ತರುತ್ತೇವೆ’ ಎಂದು ಅವರು ಹೇಳಿದರು. 

‘ಏಕಮುಖ ರಸ್ತೆಗಳಲ್ಲಿ ಬಸ್‌ಗಳಿಗೆ ಮಾತ್ರ ದ್ವಿಮುಖ ಸಂಚಾರಕ್ಕೆ ಅವಕಾಶ ಕೊಡಬೇಕು’ ಎಂದು ಹ್ಯಾರಿಸ್‌ ಅಭಿಪ್ರಾಯಪಟ್ಟರು.  

ಚಾಲಕ ನಿರ್ವಾಹಕರಿಗೆ ಗುರುತಿನ ಕಾರ್ಡ್‌ ಕೊಡುವುದು, ಪ್ರಯಾಣಿಕ ಸಿಬ್ಬಂದಿ ಸ್ನೇಹಿ ವಾತಾವರಣ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !