‘ಒತ್ತಡದಿಂದ ಮುಕ್ತರಾಗಲು ರಾಜೀನಾಮೆ ನೀಡಿ’

7
ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಲಹೆ

‘ಒತ್ತಡದಿಂದ ಮುಕ್ತರಾಗಲು ರಾಜೀನಾಮೆ ನೀಡಿ’

Published:
Updated:

ವಿಜಯಪುರ: ‘ದೋಸ್ತಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ. ಮುಖ್ಯಮಂತ್ರಿಗೆ ಆರೋಗ್ಯವೂ ಸ್ಪಂದಿಸುತ್ತಿಲ್ಲ. ಒತ್ತಡದಲ್ಲಿ ಒದ್ದಾಡುವುದಕ್ಕಿಂತ ರಾಜೀನಾಮೆ ನೀಡಿ ರೆಸ್ಟ್‌ ತೆಗೆದುಕೊಳ್ಳುವುದು ಒಳಿತು’ ಎಂದು ವಿಜಯಪುರ ನಗರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಿಎಂಗೆ ಸಲಹೆ ನೀಡಿದರು.

‘ಸಮ್ಮಿಶ್ರ ಸರ್ಕಾರವನ್ನು ದಿನಕ್ಕೊಂದು ಹೊಸ ಸಮಸ್ಯೆ ಕಾಡುತ್ತಿದೆ. ಮುಖ್ಯಮಂತ್ರಿ ಬಜೆಟ್‌ ಮಂಡಿಸುತ್ತಾರೋ ? ಅದಕ್ಕೂ ಮುನ್ನವೇ ಸರ್ಕಾರ ಪತನಗೊಳ್ಳುತ್ತದೆಯೋ ? ಎಂಬುದನ್ನು ಯಾರು ಬಲ್ಲರು ?’ ಎಂದು ಶುಕ್ರವಾರ ತಮ್ಮನ್ನು ಭೇಟಿಯಾದ ಮಾಧ್ಯಮದವರ ಬಳಿ ಮಾರ್ಮಿಕವಾಗಿ ನುಡಿದರು.

‘ಕೆಲ ದಿನಗಳ ಹಿಂದಷ್ಟೇ ಕುಮಾರಸ್ವಾಮಿ ರಾಜೀನಾಮೆಯ ಇಂಗಿತ ವ್ಯಕ್ತಪಡಿಸಿದ್ದು ಸೂಕ್ತ ನಿರ್ಧಾರ. ಇದರಂತೆ ಅತಿಯಾದ ಒತ್ತಡಕ್ಕೆ ಸಿಲುಕಿ ಮತ್ತಷ್ಟು ಆರೋಗ್ಯ ಹಾಳು ಮಾಡಿಕೊಳ್ಳುವುದಕ್ಕಿಂತ, ರಾಜೀನಾಮೆ ನೀಡಿ, ಬಿಜೆಪಿಗೆ ಅಧಿಕಾರ ನಡೆಸಲು ಅವಕಾಶ ಮಾಡಿಕೊಡಬೇಕು’ ಎಂದು ಬಸನಗೌಡ ಸಿಎಂಗೆ ಕಿವಿಮಾತು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !