ನಗರಸಭೆ: ಸಾಕುಪ್ರಾಣಿಗಳನ್ನು ಬಿಡದಂತೆ ಸೂಚನೆ

7

ನಗರಸಭೆ: ಸಾಕುಪ್ರಾಣಿಗಳನ್ನು ಬಿಡದಂತೆ ಸೂಚನೆ

Published:
Updated:

ಚಾಮರಾಜನಗರ: ನಗರಸಭಾ ವ್ಯಾಪ್ತಿಯಲ್ಲಿ ಸಾಕು ಪ್ರಾಣಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಡದಂತೆ ನಿವಾಸಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಸಾಕು ಪ್ರಾಣಿಗಳ ಮಾಲೀಕರು ಪಟ್ಟಣದೊಳಗೆ ನಾಯಿ, ಜಾನುವಾರು, ಹಂದಿ, ಇತರೆ ಪ್ರಾಣಿಗಳನ್ನು ಬಿಡುತ್ತಿರುವುದರಿಂದ ಪಟ್ಟಣದಲ್ಲಿ ಸಾರ್ವಜನಿಕರ ಓಡಾಟ, ವಾಹನ ಸಂಚಾರಕ್ಕೆ ಅಡಚಣೆಯಾಗಿ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಪ್ರಾಣಿಗಳಿಂದಾಗಿ ಸ್ವಚ್ಛತೆ ಹದಗೆಟ್ಟು ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದೆ ಎಂದು ನಗರಸಭೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಲೀಕರು ಸಾಕುಪ್ರಾಣಿಗಳನ್ನು ಮನೆಯಲ್ಲಿಯೇ ಸಾಕಬೇಕು. ಹಂದಿಗಳನ್ನು ಪಟ್ಟಣದಿಂದ 5 ಕಿ.ಮೀ. ವ್ಯಾಪ್ತಿಯ ದೂರದಲ್ಲಿ ಸಾಗಿಸಿ ನಾಗರಿಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಪಟ್ಟಣದೊಳಗಡೆ ಬಿಡುವ ಸಾಕುಪ್ರಾಣಿಗಳನ್ನು ಸೆರೆಹಿಡಿದು ಹೊರ ಸಾಗಿಸಲಾಗುವುದು. ಇದರಿಂದ ಉಂಟಾಗುವ ನಷ್ಟಗಳಿಗೆ ನಗರಸಭೆ ಹೊಣೆಯಾಗುವುದಿಲ್ಲ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !