ರಾಜ್ಯ ರಾಜಕಾರಣಕ್ಕೆ ಮರಳುವುದು ನಿಶ್ಚಿತ: ರಮೇಶ ಜಿಗಜಿಣಗಿ

ಭಾನುವಾರ, ಮೇ 26, 2019
22 °C

ರಾಜ್ಯ ರಾಜಕಾರಣಕ್ಕೆ ಮರಳುವುದು ನಿಶ್ಚಿತ: ರಮೇಶ ಜಿಗಜಿಣಗಿ

Published:
Updated:

ವಿಜಯಪುರ: ‘ರಾಜ್ಯ ರಾಜಕಾರಣಕ್ಕೆ ಮರಳುವುದು ನಿಶ್ಚಿತ. ಆದರೆ ನನ್ನನ್ನು ಈ ಬಾರಿ ನೀವು ಮತ್ತೊಮ್ಮೆ ಸಂಸದನನ್ನಾಗಿ ಆರಿಸಿದರೆ, ಪ್ರಧಾನಿ ಮೋದಿ ಮತ್ತಷ್ಟು ಉನ್ನತ ಸ್ಥಾನ ನೀಡುತ್ತಾರೆ’ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ತಿಳಿಸಿದರು.

‘ವಿಜಯಪುರದ ಆರಾಧ್ಯದೈವ ಸಿದ್ಧೇಶ್ವರ ಕರೆಸಿಕೊಂಡಾಗ ರಾಜ್ಯದ ರಾಜಕಾರಣಕ್ಕೆ ಪುನಃ ಬರುವೆ. ಆದರೆ ಯಾವಾಗ ಎಂಬುದು ಮಾತ್ರ ಪ್ರಶ್ನಾರ್ಥಕವಾಗಿರಲಿದೆ’ ಎಂದು ಗುರುವಾರ ಅಲಿಯಾಬಾದ್‌ನಲ್ಲಿ ನಡೆದ ರೈಲ್ವೆ ಮೇಲ್ಸೇತುವೆ ಶಂಕುಸ್ಥಾಪನಾ ಸಮಾರಂಭದಲ್ಲಿ ಕೇಂದ್ರ ಸಚಿವರು ಪ್ರಕಟಿಸಿದರು.

‘ರಾಜ್ಯ ಸರ್ಕಾರದ ನಡೆ ತಾಳ ತಪ್ಪಿದ ಬಾಳ್ವೆ ಆದಂಗ ಆಗೈತಿ. ವಿಜಯಪುರದ ಇಬ್ರಾಹಿಂಪುರ ರೈಲ್ವೆ ಗೇಟ್ ಬಳಿ ಮೇಲ್ಸೇತುವೆ ಕಾಮಗಾರಿ ಕೈಗೊಳ್ಳಲು ಗುತ್ತಿಗೆದಾರ ತುದಿಗಾಲಲ್ಲಿ ನಿಂತ್ವಾನೆ. ಆದ್ರೆ ಮಹಾನಗರ ಪಾಲಿಕೆ ಆಡಳಿತ ಸ್ಪಂದಿಸುತ್ತಿಲ್ಲ.’

‘ಈ ಸಮಸ್ಯೆ ಪರಿಹರಿಸುವಂತೆ ಸೂಚಿಸಲು ಗುರುವಾರ ಬೆಳಿಗ್ಗೆ ಜಿಲ್ಲಾಧಿಕಾರಿಗೆ ಮೊಬೈಲ್ ಕರೆ ಮಾಡಿದ್ರೇ, ಸಾಹೇಬ್ರೇ ನಂದು ಬುಧವಾರ ರಾತ್ರಿಯೇ ವರ್ಗವಾಗೈತಿ. ಮುಂದೆ ಬರೋ ಜಿಲ್ಲಾಧಿಕಾರಿ ಬಳಿ ಕೆಲಸ ಮಾಡಿಸಿಕೊಳ್ಳಿ ಅಂದ್ರು.’

‘ಈ ಸರ್ಕಾರದಲ್ಲಿ ರಾತ್ರಿ ಯಾರು ಎಲ್ಲಿಗೆ ಹೋಗ್ತ್ವಾನೆ. ಮುಂಜಾನೆ ಯಾರು ಬರ್ತ್ವಾನೆ ಎಂಬುದೇ ಗೊತ್ತಾಗ್ತಿಲ್ಲ’ ಎಂದು ಜಿಗಜಿಣಗಿ ವ್ಯಂಗ್ಯವಾಡಿದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 1

  Sad
 • 1

  Frustrated
 • 3

  Angry

Comments:

0 comments

Write the first review for this !