‘ವಾಸ್ತುಶಿಲ್ಪಕ್ಕೆ ಬೇಕು ಸಂಶೋಧನೆಯ ತಳಹದಿ’

7

‘ವಾಸ್ತುಶಿಲ್ಪಕ್ಕೆ ಬೇಕು ಸಂಶೋಧನೆಯ ತಳಹದಿ’

Published:
Updated:
Deccan Herald

ಬೆಂಗಳೂರು: ‘ಪರಿಣತಿ ಮತ್ತು ಸಂಶೋಧನೆಯ ಮೂಲ ತಳಹದಿ ಆಧುನಿಕ ವಾಸ್ತುಶಿಲ್ಪ ಕ್ಷೇತ್ರಕ್ಕೆ ಅಗತ್ಯವಾಗಿದೆ’ ಎಂದು ಭಾರತೀಯ ವಾಸ್ತುಶಾಸ್ತ್ರಜ್ಞರ ಸಂಸ್ಥೆಯ ಕರ್ನಾಟಕ ಘಟಕದ ಅಧ್ಯಕ್ಷೆ ಲೀನಾ ಕುಮಾರ್‌ ಹೇಳಿದರು.

ನಗರದ ರೇವಾ ವಿಶ್ವವಿದ್ಯಾಲಯದಲ್ಲಿ ವಾಸ್ತುವಿನ್ಯಾಸದ ಸಂರಕ್ಷಣೆಯ ಅಗತ್ಯದ ಕುರಿತ ವಾಸ್ತುತಜ್ಞರ ಅಂತರರಾಷ್ಟ್ರೀಯ ಸಮ್ಮೇಳನ ‘ಬಿಟ್ವೀನ್‌ ದ ಲೈನ್ಸ್‌’ನ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಅವರು ಮಾತನಾಡಿದರು.

‘ಸಂಶೋಧನಾ ಸಲಹೆಗಾರರು ವಾಸ್ತುಶಿಲ್ಪಿಗಳಿಗೆ ಜ್ಞಾನದ ದಾರಿ ತೋರುವ ಮಾರ್ಗದರ್ಶಕರಾಗಬೇಕು. ಇದರಿಂದ ಅವರ ವಿನ್ಯಾಸಗಳನ್ನು ಕಾರ್ಯಗತಗೊಳಿಸಲು ನಿರ್ದೇಶನ ನೀಡಿದಂತಾಗುತ್ತದೆ. ಪುರಾತನ ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ದಾಖಲೆಗಳು ಮುಂದಿನ ದಿನಗಳಲ್ಲಿ ನಾಶವಾಗಿ ಹೋಗುವ ಆತಂಕವೂ ಇದೆ. ಆದ್ದರಿಂದ ಅವುಗಳನ್ನು ಸಂರಕ್ಷಿಸಿಟ್ಟುಕೊಳ್ಳಬೇಕು’ ಎಂದು ಪ್ರತಿಪಾದಿಸಿದರು.

ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಶ್ಯಾಮರಾಜು ಮಾತನಾಡಿ, ‘ವಿಶ್ವವಿದ್ಯಾಲಯದ ಆವರಣದಲ್ಲೇ ವಾಸ್ತು ವಿನ್ಯಾಸಕ್ಕೆ ಸಾಕಷ್ಟು ಆದ್ಯತೆ ನೀಡಿದ್ದೇವೆ. ಒಂದು ಅರ್ಥದಲ್ಲಿ ವಿ.ವಿ ಆವರಣವೇ ವಾಸ್ತುಶಿಲ್ಪದ ನೈಜ ಪ್ರಯೋಗಶಾಲೆ. ವಿ.ವಿಯ ವಾಸ್ತುಶಿಲ್ಪ ಶಾಲೆ ವಿಶ್ವವಿದ್ಯಾಲಯದ ಆಧಾರ ಸ್ತಂಭ’ ಎಂದು ಬಣ್ಣಿಸಿದರು. 

ತೈವಾನ್‌ನ ಗ್ರಾಜುಯೇಟ್‌ ಇನ್ಸ್‌ಟಿಟ್ಯೂಟ್‌ ಆಫ್‌ ಆರ್ಕಿಟೆಕ್ಚರ್‌ ಆ್ಯಂಡ್‌ ಅರ್ಬನ್‌ ಡಿಸೈನ್‌ನ ಡಾ.ಕುವಾಂಗ್‌ ಹ್ಯೂ ಪೆಂಗ್‌ ಮತ್ತು ಶ್ರೀಲಂಕಾದ ವಾಸ್ತುಶಾಸ್ತ್ರಜ್ಞ ಪಲ್ಲಿಂಡ ಕನ್ನಂಗಾರ ಆಶಯ ಭಾಷಣ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !