‘ರೇವಣ್ಣ ಸೂಪರ್‌ ಸಿ.ಎಂ. ಅಲ್ಲ’

7

‘ರೇವಣ್ಣ ಸೂಪರ್‌ ಸಿ.ಎಂ. ಅಲ್ಲ’

Published:
Updated:

ಬೆಂಗಳೂರು: ‘ಸಚಿವ ಎಚ್.ಡಿ.ರೇವಣ್ಣ ಅವರು ಸೂಪರ್ ಸಿ.ಎಂ ಅಲ್ಲ. ಅವರು ಏನು, ಎತ್ತ ಎಂಬುದನ್ನು ಅರಿತು ಮಾತನಾಡಬೇಕು’ ಎಂದು ಕಾಂಗ್ರೆಸ್‌ ಮುಖಂಡ ಎಚ್‌.ಎಂ. ರೇವಣ್ಣ ಕಿವಿಮಾತು ಹೇಳಿದರು.

‘ಕಾಂಗ್ರೆಸ್‌ ನಮ್ಮ ಮೇಲೆ ಒತ್ತಡ ಹಾಕಿದರೆ ನಮ್ಮ ದಾರಿ ನಮಗೆ’ ಎಂದಿದ್ದ ಸಚಿವ ಎಚ್.ಡಿ.ರೇವಣ್ಣ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು.

‘ಹದಿನೈದು ದಿನಗಳಿಂದ ಜೆಡಿಎಸ್‌ ನಾಯಕರು ಕಾಂಗ್ರೆಸ್‌ ವಿರುದ್ಧ ಮಾತನಾಡಲು ಶುರುವಿಟ್ಟುಕೊಂಡಿದ್ದಾರೆ. ಹೈಕಮಾಂಡ್ ನಿರ್ದೇಶನವನ್ನು ನಾವು ಪಾಲಿಸಬೇಕು. ಕೋಮುವಾದಿ ಬಿಜೆಪಿಯನ್ನು ದೂರ ಮಾಡುವುದಕ್ಕಾಗಿ ಜೆಡಿಎಸ್‌ ಜತೆಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಜೆಡಿಎಸ್‌ ಮೈತ್ರಿಧರ್ಮ ಪಾಲಿಸಬೇಕು’ ಎಂದರು.

‘ರಾಹುಲ್‌ ಗಾಂಧಿ ಅವರ ತೀರ್ಮಾನದಂತೆ ಪಟ್ಟಿ ಕೊಟ್ಟಿದ್ದೆವು. ಅದಕ್ಕೆ ಸಹಮತ ವ್ಯಕ್ತಪಡಿಪಡಿಸುವುದು ಮೈತ್ರಿಧರ್ಮ ಕಾರ್ಯ. ನಮ್ಮಲ್ಲಿಯೂ ಸಣ್ಣ-ಪುಟ್ಟ ಸಮಸ್ಯೆಗಳಿವೆ. ನಮ್ಮ ನಾಯಕರು ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರೊಂದಿಗೆ ಚರ್ಚಿಸಿ ಸರಿಪಡಿಸಿಕೊಳ್ಳುತ್ತಾರೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !