ಸಿದ್ದರಾಮಯ್ಯ ಬೆಂಗಾವಲು ವಾಹನ ಡಿಕ್ಕಿ: 5 ವಾಹನ ಜಖಂ

7

ಸಿದ್ದರಾಮಯ್ಯ ಬೆಂಗಾವಲು ವಾಹನ ಡಿಕ್ಕಿ: 5 ವಾಹನ ಜಖಂ

Published:
Updated:
Prajavani

ಶ್ರೀರಂಗಪಟ್ಟಣ: ತಾಲ್ಲೂಕಿನ ಗೌಡಹಳ್ಳಿ ಗೇಟ್ ಬಳಿ ಬುಧವಾರ ಬೆಳಿಗ್ಗೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಬೆಂಗಾವಲು ವಾಹನಗಳ ಪೈಕಿ ‘ಟೇಲ್’ ಕಾರಿಗೆ ಅದರ ಹಿಂದೆ ಬರುತ್ತಿದ್ದ ವಾಹನ ಡಿಕ್ಕಿ ಹೊಡೆದು 5 ಕಾರುಗಳು ಜಖಂಗೊಂಡಿವೆ.

ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ವಾಹನಕ್ಕಿಂತ ಸಾಕಷ್ಟು ಹಿಂದೆ ಬರುತ್ತಿದ್ದ ಟೇಲ್ ಕಾರಿಗೆ ತುರ್ತು ಸಂದರ್ಭದಲ್ಲಿ ಬಳಸುವ ಕಾರು ಡಿಕ್ಕಿ ಹೊಡೆದಿದೆ.

‘ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌, ಟೇಲ್ ಕಾರನ್ನು ಹಿಂದಿಕ್ಕಲು ಯತ್ನಿಸಿದೆ. ಆ ಸಂದರ್ಭದಲ್ಲಿ ಟೇಲ್ ಕಾರಿನ ಚಾಲಕ ಬ್ರೇಕ್ ಹಾಕಿದ್ದಾರೆ. ಅದರ ಹಿಂದೆ ಬರುತ್ತಿದ್ದ ಇತರ ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಜಖಂಗೊಂಡಿರುವ ಟೇಲ್ ಕಾರು, ವಿಪಿ ಕಾರು ಮತ್ತು ಇತರ ಮೂರು ಸ್ವಿಫ್ಟ್ ಕಾರುಗಳಲ್ಲಿ ಇದ್ದವರಿಗೂ ಯಾವುದೇ ಅಪಾಯವಾಗಿಲ್ಲ. ಅಪಘಾತದಿಂದ ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಕೆಲಕಾಲ ತೊಡಕಾಗಿತ್ತು.

ಅಪಘಾತದ ಭಯ; ಎಆರ್‌ಎಸ್ಐ ಸಾವು
ಮಂಡ್ಯ: ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬೆಂಗಾವಲು ಪಡೆ ಸಿಬ್ಬಂದಿ ಎಆರ್‌ಎಸ್‌ಐ ಮರೀಗೌಡ (56) ಹೃದಯಾಘಾತಕ್ಕೀಡಾಗಿ ಬುಧವಾರ ಸಂಜೆ ಮೃತಪಟ್ಟಿದ್ದಾರೆ.

ಬೆಳಿಗ್ಗೆ ಸಂಭವಿಸಿದ ಬೆಂಗಾವಲು ವಾಹನದ ಅಪಘಾತವನ್ನು ಕಂಡು ವಾಹನದಲ್ಲಿದ್ದ ಮರೀಗೌಡ ಆಘಾತಕ್ಕೆ ಒಳಗಾಗಿದ್ದರು. ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದರು. ಅಪಘಾತದಲ್ಲಿ ಕಾರುಗಳು ಮಾತ್ರ ಜಖಂಗೊಂಡಿದ್ದು, ಯಾವುದೇ ಸಾವು, ನೋವು ಸಂಭವಿಸಿರಲಿಲ್ಲ. ಆದರೆ, ಭಯಗೊಂಡಿದ್ದ ಮರೀಗೌಡ ನಗರದ ಪೊಲೀಸ್ ವಸತಿಗೃಹದ ತಮ್ಮ ಮನೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 6

  Sad
 • 1

  Frustrated
 • 0

  Angry

Comments:

0 comments

Write the first review for this !