ಸಾವಿನಲ್ಲೂ ಸಾರ್ಥಕತೆ: ಪತಿಯ ಅಂಗಾಂಗ ದಾನ ಮಾಡಿದ ಗರ್ಭಿಣಿ

7

ಸಾವಿನಲ್ಲೂ ಸಾರ್ಥಕತೆ: ಪತಿಯ ಅಂಗಾಂಗ ದಾನ ಮಾಡಿದ ಗರ್ಭಿಣಿ

Published:
Updated:

ಬೆಂಗಳೂರು: ಬೆಳಿಗ್ಗೆ ಮನೆ ಬಿಟ್ಟ ಪತಿ ಶವವಾಗಿ ಬಂದಿದ್ದಾರೆ, ಹೊಟ್ಟೆಯಲ್ಲಿ ಎಂಟು ತಿಂಗಳ ಮಗು..ಇಂತಹ ಸಂದರ್ಭದಲ್ಲೂ ಕಳಕಳಿ ಮೆರೆಯುವುದನ್ನು ಮಾತ್ರ ಮರೆಯಲಿಲ್ಲ.

ನಗರದ ನಿವಾಸಿ ಚಂದನಾ, ತಮ್ಮ ಪತಿಯ ಸಾವಿನ ದುಃಖದ ನಡುವೆಯೂ ಅಂಗಾಂಗ ದಾನಕ್ಕೆ ಅನುಮತಿ ನೀಡುವ ಮೂಲಕ ಮಾನವೀಯ ಗುಣ ಮೆರೆದಿದ್ದಾರೆ.

ಶರತ್‌ ಬಾಬು (30) ಅವರು ಬುಧವಾರ, ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಯಶವಂತಪುರದ ಸ್ಪರ್ಶ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಅವರ ಕಿಡ್ನಿ, ಯಕೃತ್‌, ಹೃದಯದ ಕವಾಟಗಳನ್ನು ದಾನ ಮಾಡಲಾಗಿದೆ.

‘ಬದುಕುಳಿಯುವ ಸಾಧ್ಯತೆ ಇಲ್ಲ. ಮಿದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಹೇಳಿದರು. ಆ ಕ್ಷಣಕ್ಕೆ ನಾವು ನಂಬಲಿಲ್ಲ. ಕೆಲವೇ ನಿಮಿಷಗಳಲ್ಲಿ ಸುಧಾರಿಸಿಕೊಂಡ ಶರತ್‌ ಅವರ ತಾಯಿ, ತಂದೆ ಹಾಗೂ ಪತ್ನಿ ಅಂಗಾಂಗ ದಾನಕ್ಕೆ ಅನುಮತಿ ನೀಡುವ ತೀರ್ಮಾನ ಮಾಡಿದರು. ಆ ನಿರ್ಧಾರ ಅಷ್ಟು ಸುಲಭದ್ದಾಗಿರಲಿಲ್ಲ. ಅವರ ಪತ್ನಿ ಗರ್ಭಿಣಿಯಾಗಿದ್ದರು. ಅಂತಹ ಸಂದರ್ಭದಲ್ಲೂ ಧೈರ್ಯವಾಗಿ ಒಪ್ಪಿದರು’ ಎಂದು ಶರತ್‌ ಸ್ನೇಹಿತ ರಾಜೇಂದ್ರಕುಮಾರ್ ಹೇಳಿದರು.

‘ಯಕೃತ್‌ ಹಾಗೂ ಒಂದು ಕಿಡ್ನಿಯನ್ನು ಸ್ಪರ್ಶ ಆಸ್ಪತ್ರೆಯ ರೋಗಿಗೆ ಕಸಿ ಮಾಡಲಾಗುವುದು. ಇನ್ನೊಂದು ಕಿಡ್ನಿಯನ್ನು ಬಿಜಿಎಸ್‌ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹೃದಯದ ಕವಾಟವನ್ನು ಜಯದೇವ ಆಸ್ಪತ್ರೆಗೆ ಕೊಡಲಾಗಿದೆ’ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 50

  Happy
 • 0

  Amused
 • 3

  Sad
 • 0

  Frustrated
 • 1

  Angry

Comments:

0 comments

Write the first review for this !