ಚಡಚಣ ದರೋಡೆ ಪ್ರಕರಣ: ನಾಲ್ವರ ಬಂಧನ; ₹ 55 ಲಕ್ಷ ವಶ

ಗುರುವಾರ , ಜೂನ್ 27, 2019
29 °C

ಚಡಚಣ ದರೋಡೆ ಪ್ರಕರಣ: ನಾಲ್ವರ ಬಂಧನ; ₹ 55 ಲಕ್ಷ ವಶ

Published:
Updated:

ವಿಜಯಪುರ: ‘ಚಡಚಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹೋದರರಿಬ್ಬರು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ₹ 54,85,500 ನಗದು, ₹ 9 ಲಕ್ಷ ಮೌಲ್ಯದ ಮಹೀಂದ್ರಾ ಎಕ್ಸ್‌ಯುವಿ ವಾಹನ ವಶಪಡಿಸಿಕೊಂಡಿದ್ದೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಅಮೃತ್ ನಿಕ್ಕಂ ತಿಳಿಸಿದರು.

‘ರವಿ ಶಿಂಧೆ, ಕಿರಣ ವಾಳಖಿಂಡಿ, ಗಂಗರಾಮ ಕೋಳಿ, ಭೀಮು ಶಿಂಧೆ ಬಂಧಿತರು. ಇನ್ನಿಬ್ಬರು ಆರೋಪಿಗಳು ನಾಪತ್ತೆಯಾಗಿದ್ದಾರೆ’ ಎಂದು ನಿಕ್ಕಂ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಬೆಳಗಾವಿ, ವಿಜಯಪುರ ಜಿಲ್ಲೆ ವ್ಯಾಪ್ತಿಯ 11 ಪ್ರಕರಣಗಳಲ್ಲಿ ರವಿ ಶಿಂಧೆ ಪೊಲೀಸರಿಗೆ ಬೇಕಾಗಿದ್ದ. ಬಾಹುಬಲಿ ಮುತ್ತಿನ ಚಡಚಣ ಅವರ ಬಟ್ಟೆ ಅಂಗಡಿಯಲ್ಲೇ ಕೆಲಸ ಮಾಡುತ್ತಿದ್ದ ಕಿರಣ ವಾಳಖಿಂಡಿ, ಗಂಗಾರಾಮ ಕೋಳಿ ಜತೆ ಸೇರಿ ದರೋಡೆಯ ಸಂಚು ರೂಪಿಸಿದ್ದ.

ಮೇ 9ರ ರಾತ್ರಿ ಅಂಗಡಿ ಮುಚ್ಚಿಕೊಂಡು, ದಿನದ ವಹಿವಾಟಿನ ಹಣದೊಂದಿಗೆ ಮ್ಯಾನೇಜರ್ ಸಂತೋಷ ಕಾಮಗೊಂಡ ಜತೆ ಅಜಿತ ಮತ್ತಿನ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ, ₹ 80 ಲಕ್ಷ ದರೋಡೆ ನಡೆದಿತ್ತು’ ಎಂದು ಪ್ರಕಾಶ್‌ ಘಟನೆಯ ಮಾಹಿತಿ ನೀಡಿದರು.

‘ದರೋಡೆಯ ಬಳಿಕ ಎಲ್ಲರೂ ಗೋವಾ ಇನ್ನಿತರೆಡೆ ಪರಾರಿಯಾಗಿದ್ದರು. ಈ ಅವಧಿಯಲ್ಲಿ ಸಾಕಷ್ಟು ದುಡ್ಡು ಖರ್ಚು ಮಾಡಿದ್ದಾರೆ. ದರೋಡೆ ಮಾಡಿದ ರೊಕ್ಕದಲ್ಲೇ ₹ 9 ಲಕ್ಷ ಮೌಲ್ಯದ ಮಹೀಂದ್ರಾ ಎಕ್ಸ್‌ಯುವಿ–500 ವಾಹನ ಖರೀದಿಸಿದ್ದಾರೆ’ ಎಂದು ಹೇಳಿದರು.

ದರೋಡೆಕೋರರನ್ನು ಪತ್ತೆ ಹಚ್ಚಿ ಬಂಧಿಸಿದ ಪೊಲೀಸರ ತಂಡಕ್ಕೆ ಪ್ರಕಾಶ್‌ ಅಮೃತ್‌ ನಿಕ್ಕಂ ಇದೇ ಸಂದರ್ಭ ₹ 1 ಲಕ್ಷ ಮೊತ್ತದ ಬಹುಮಾನ ಘೋಷಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !