ನಿವೃತ್ತ ವಿಜ್ಞಾನಿಯ ಮನೆಗೆ ನುಗ್ಗಿ ಸುಲಿಗೆ; ಐವರ ಸೆರೆ

7
₹25 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ

ನಿವೃತ್ತ ವಿಜ್ಞಾನಿಯ ಮನೆಗೆ ನುಗ್ಗಿ ಸುಲಿಗೆ; ಐವರ ಸೆರೆ

Published:
Updated:
Deccan Herald

ಬೆಂಗಳೂರು: ನಿವೃತ್ತ ವಿಜ್ಞಾನಿ ದಿವಂಗತ ಚಂದ್ರಶೇಖರ್ ಅವರ ಮನೆಗೆ ನುಗ್ಗಿ, ಅವರ ಪತ್ನಿ ಇಳಾ ಅವರನ್ನು ಕೂಡಿಹಾಕಿ ಸುಲಿಗೆ ಮಾಡಿದ್ದ ಐವರು ಆರೋಪಿಗಳನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಗೌರಿಬಿದನೂರು ತಾಲ್ಲೂಕಿನ ನಿವಾಸಿಗಳಾದ ಎನ್‌.ವೈ.ನಾಗರಾಜ್, ರವಿಕುಮಾರ್, ಗಂಗಾಧರ, ಬಸವರಾಜ ಹಾಗೂ ಗಂಗರಾಜು ಬಂಧಿತರು. ಅವರಿಂದ ₹25 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

‘ಆರೋಪಿಗಳು, ಕೂಲಿ ಕೆಲಸಕ್ಕಾಗಿ ನಗರಕ್ಕೆ ಬರುತ್ತಿದ್ದರು. ಒಂಟಿಯಾಗಿ ವಾಸಿಸುವ ಮಹಿಳೆಯರು ಹಾಗೂ ವಯೋವೃದ್ಧ ಮನೆಗಳನ್ನು ಗುರುತಿಸಿ ಕೃತ್ಯ ಎಸಗುತ್ತಿದ್ದರು. ಇವರ ಬಂಧನದಿಂದ ವಿದ್ಯಾರಣ್ಯಪುರ ಹಾಗೂ ಯಲಹಂಕ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಪ್ರಕರಣಗಳು ಪತ್ತೆಯಾಗಿವೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಸೀಮಂತ್‌ಕುಮಾರ್ ಸಿಂಗ್‌ ತಿಳಿಸಿದರು.

ಕೈ ಕಾಲು ಕಟ್ಟಿ ಹಾಕಿ ಕೃತ್ಯ: ಬುದ್ಧಿಮಾಂದ್ಯ ಮಗನ ಜತೆ ದೊಡ್ಡಬೊಮ್ಮಸಂದ್ರದ ಮೂಕಾಂಬಿಕಾ ಫಾರ್ಮ್‌ಹೌಸ್‌ನಲ್ಲಿರುವ ಬಂಗಲೆಯಲ್ಲಿ ಇಳಾ ವಾಸವಿದ್ದಾರೆ. ಬಂಗಲೆಗೆ ನುಗ್ಗಿದ್ದ ಆರೋಪಿಗಳು, ಅವರ ಬಾಯಿಗೆ ಪ್ಲಾಸ್ಟರ್‌ ಅಂಟಿಸಿ ಕೈಕಾಲು ಕಟ್ಟಿ ಹಾಕಿ ಚಿನ್ನಾಭರಣ ಹಾಗೂ ನಗದು ದೋಚಿದ್ದರು ಎಂದು ಪೊಲೀಸರು ಹೇಳಿದರು.

‘ಇಳಾ ಅವರ ಮನೆ ಬಳಿ ಆರೋಪಿಗಳು ಓಡಾಡಿದ್ದ ದೃಶ್ಯ ಸ್ಥಳೀಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದನ್ನು ಆಧರಿಸಿ ಹುಡುಕಾಟ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದರು’ ಎಂದರು. 

ನಿವೃತ್ತ ನ್ಯಾಯಾಧೀಶರ ಮನೆಯಲ್ಲೂ ಸುಲಿಗೆ: ‘ಯಲಹಂಕದ ನ್ಯಾಯಾಂಗ ಬಡಾವಣೆಯಲ್ಲಿರುವ ನಿವೃತ್ತ ನ್ಯಾಯಾಧೀಶ ದಿವಂಗತ ರುದ್ರಪ್ಪ ಅವರ ಮನೆಗೂ ನುಗ್ಗಿದ್ದ ಆರೋಪಿಗಳು, ಅವರ ಪತ್ನಿಯನ್ನು ಬೆದರಿಸಿ ಸುಲಿಗೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.


–ಆರೋಪಿಗಳಿಂದ ಜಪ್ತಿ ಮಾಡಲಾದ ಚಿನ್ನಾಭರಣಗಳು

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !