ಸ್ನೇಹಿತರ ಬೈಕ್‌ ಬಳಸಿ ಸುಲಿಗೆ

7

ಸ್ನೇಹಿತರ ಬೈಕ್‌ ಬಳಸಿ ಸುಲಿಗೆ

Published:
Updated:

ಬೆಂಗಳೂರು: ಸ್ನೇಹಿತರ ಬೈಕ್‌ ಬಳಸಿಕೊಂಡು ಮೊಬೈಲ್ ಸುಲಿಗೆ ಮಾಡುತ್ತಿದ್ದ ಆರೋಪದಡಿ ಮೂವರನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. 

ಸ್ಥಳೀಯ ನಿವಾಸಿಗಳಾದ ಮನೋಜ್ ಅಲಿಯಾಸ್ ಚಪಾತಿ, ಕಾರ್ತಿಕ್ ಹಾಗೂ ರಾಜು ಬಂಧಿತರು. ಅವರಿಂದ ಎರಡು ಬೈಕ್ ಹಾಗೂ 16 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.

'ತುರ್ತು ಕೆಲಸವಿದ್ದು, ಬೈಕ್ ಕೊಡು’ ಎಂದು ಸ್ನೇಹಿತರನ್ನು ಕೇಳುತ್ತಿದ್ದ ಆರೋಪಿಗಳು, ಅವರ ಬೈಕ್‌ನಲ್ಲಿ ನಗರದೆಲ್ಲೆಡೆ ಸುತ್ತಾಡುತ್ತಿದ್ದರು. ರಸ್ತೆಯಲ್ಲಿ ಒಂಟಿಯಾಗಿ ಓಡಾಡುತ್ತಿದ್ದ ಸಾರ್ವಜನಿಕರನ್ನು ಅಡ್ಡಗಟ್ಟಿ, ನಗದು ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಕೃತ್ಯದ ಬಳಿಕ ಯಥಾಪ್ರಕಾರ ಬೈಕ್‌ನ್ನು ಸ್ನೇಹಿತರಿಗೆ ವಾಪಸ್‌ ಕೊಡುತ್ತಿದ್ದರು. ಸುಲಿಗೆ ಮಾಡಿದ ಮೊಬೈಲ್‌ ಮಾರಾಟ ಮಾಡಿ, ಅದರಿಂದ ಬಂದ ಹಣವನ್ನು ಹಂಚಿಕೊಂಡು ದುಶ್ಚಟಗಳಿಗೆ ಖರ್ಚು ಮಾಡುತ್ತಿದ್ದರು’ ಎಂದು ತಿಳಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !